ಮುಂಬೈ: ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಏಕಾಂಗಿ ಹೋರಾಟದಿಂದ ಭಾರತ ಮೊದಲ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ 29 ರನ್‌ಗಳ ಜಯ ಗಳಿಸಿತು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸಿಡಲಬ್ಬರದ ಬ್ಯಾಟರ್ ಅಭಿಶೇಕ್ ಶರ್ಮ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರು.

ಇದನ್ನೂ ಓದಿ: Agni-3 ಪರಮಾಣು ಕ್ಷಿಪಣಿ ಯಶಸ್ವಿ ಪರೀಕ್ಷೆ
ಇಶನ್ ಕಿಶನ್ ಮತ್ತು ತಿಲಕ್ ವರ್ಮ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಔಟಾದ ನಂತರ ಯಾವೊಬ್ಬ ಬ್ಯಾಟರ್ ಕೂಡ ಯುಎಸ್ಎ ದಾಳಿಯನ್ನು ಎದುರಿಸಲು ಆಗದೆ ವಿಕೆಟ್ ಕೈ ಚೆಲ್ಲುತ್ತಾ ಸಾಗಿದರು. ಮತ್ತೊಂದು ಕಡೆ ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿ 49 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಅಜೇಯ 84 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ತಿಲಕ್ ವರ್ಮ 25, ಇಶನ್ ಕಿಶನ್ 20, ಅಕ್ಷರ್ ಪಟೇಲ್ 14, ರಿಂಕು ಸಿಂಗ್ 6, ಹಾರ್ದಿಕ್ ಪಾಂಡ್ಯ 5, ಅರ್ಶದೀಪ್ ಸಿಂಗ್ 4 ರನ್ ಗಳಿಸಿದರು.
ಉತ್ತಮ ಸಂಘಟಿತ ಪ್ರದರ್ಶನ ನೀಡಿದ ಯುಎಸ್ಎ ಪರ ಶ್ಕಾಲ್ವೈಕ್ 4, ಹರ್ಮೀತ್ ಸಿಂಗ್ 2, ಅಲಿ ಖಾನ್ ಮತ್ತು ಮುಹಮ್ಮದ್ ಮೊಹಿಸಿನ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಯುಎಸ್ಎ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ 29 ರನ್‌ಗಳಿಂದ ಸೋಲಪ್ಪಿತು.
ತಂಡದ ಪರ ಸಂಜಯ್ ಕೃಷ್ಣಮೂರ್ತಿ ಮತ್ತು ಶುಭಂ ರಂಜಾನೆ ತಲಾ 37 ರನ್, ಮಿಲಿಂದ್ ಕುಮಾರ್ 34 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಉಳಿದ ಬ್ಯಾಟರ್‌ಗಳು ಎರಡಂಕಿ ದಾಟಲು ಪರದಾಡಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ 3, ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2, ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು.
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

