ಬಂಟ್ವಾಳ: ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿದಾರ್ ಮೂವರು ದೈವಂಗಳ ನೇಮೋತ್ಸವವು ಫೆ.6 ರಿಂದ ಫೆ.8ರ ವರೆಗೆ ನಡೆಯಿತು.
ಫೆ.6 ರಂದು ಬೆಳಗ್ಗೆ 9 ಗಂಟೆಗೆ ಗಣಪತಿ ಹವನ ನಡೆದು, ಮಧ್ಯಾಹ್ನ 12.30ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಏಕದಶ ರುದ್ರಾಭಿಷೇಕ ನಡೆಯಿತು. ಸಂಜೆ 5.30ಕ್ಕೆ ಇರಾ ಬಾವಬೀಡಿನಿಂದ ಕಿರುವಾಲು ಹೊರಟಿತು.

ಸಂಜೆ 6 ಗಂಟೆಯಿಂದ ಮಂಜೇಶ್ವರದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಜೈ ಭಜರಂಗಬಲಿ ಎಂಬ ವಿನೂತನ ನಾಟಕ ಪ್ರದರ್ಶನಗೊಂಡಿತು. ಸಂಜೆ 7 ಗಂಟೆಗೆ ಕುಕ್ಕಾಜೆಯಲ್ಲಿ ಮಂಚಿ ಗ್ರಾಮಸ್ಥರು ಕಿರುವಾಲು ಎದುರುಗೊಂಡು ಸಕಲ ಬಿರುದಾವಳಿಯೊಂದಿಗೆ ಮಂಚಿ ಸಾವಿರದ ಮಾಡ ಪ್ರವೇಶಿಸಿತು. ರಾತ್ರಿ 10 ಗಂಟೆಗೆ ಶ್ರೀ ದೈವಂಗಳ ನೇಮೋತ್ಸವ ಪ್ರಾರಂಭಗೊಂಡಿತು.

ಇದನ್ನೂ ಓದಿ: ಮಹಿಳೆಯರೇ ಇನ್ಮುಂದೆ ಗೃಹಲಕ್ಷ್ಮೀ ಯೋಜನೆ ಹಣ ಸಿಗಬೇಕಾದರೆ ಈ ಪ್ರಮಾಣಪತ್ರ ಕಡ್ಡಾಯ
ಫೆ.7 ರಂದು ರಾತ್ರಿ 7.30ಕ್ಕೆ ರೇಖಾ ಪ್ರಶಾಂತ್ ಅವರ ನಟರಾಜ ನೃತ್ಯಾಲಯ ಇರಾ ತಂಡದಿಂದ ನೃತ್ಯ ವೈವಿಧ್ಯ ನಡೆಯಿತು. ರಾತ್ರಿ 10 ಗಂಟೆಗೆ ಶ್ರೀ ಅರಸು ಕುರಿಯಾಡಿದಾರ್ ದೈವಕ್ಕೆ ನೇಮ, ಬಂಡಿ ಉತ್ಸವ ನಡೆದ ಬಳಿಕ ಶ್ರೀ ಮಲರಾಯ ದೈವದ ನೇಮ ನಡೆಯಿತು.

ಫೆ.8 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಜುಮಾದಿ-ಜುಮಾದಿ ಬಂಟ ದೈವಗಳ ನೇಮ ನಡೆದ ಬಳಿಕ ಶ್ರೀ ಪಿಲಿಚಾಮುಂಡಿ ದೈವದ ನೇಮ ನಡೆಯಿತು. ಸಂಜೆ 5 ಗಂಟೆಗೆ ಕಿರುವಾಲು ಇಳಿಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

