ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲ್ಯಾಂಡ್ ತಂಡದ ವಿರುದ್ಧ ಶ್ರೀಲಂಕಾ ತಂಡವು 20 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ತಂಡದ ಪರ ಕುಸಾಲ್ ಮೆಂಡಿಸ್ ಅಜೇಯ 56ರನ್ ಬಾರಿಸಿದರು. 5 ಬೌಂಡರಿಗಳನ್ನು ಬಾರಿಸಿ ಒಟ್ಟು 43 ಎಸೆತಗಳಲ್ಲಿ 56 ರನ್ ಬಾರಿಸಿ ಅಜೇಯರಾಗಿ ಉಳಿದರು.

ಇನ್ನುಳಿದಂತೆ, ಕಾಮಿಂಡು ಮೆಂಡಿಸ್ 19 ಬಾಲ್‌ಗಳಲ್ಲಿ 44 ರನ್ ಬಾರಿಸಿದರು. ಅಲ್ಲದೆ,ಪಾತುಮ್ ನಿಸ್ಸಂಕ 24, ಕಾಮಿಲ್ ಮಿಶಾರ 14, ಪವನ್ ರಥನಾಯಕೆ 5, ಡುನಿತ್ ವೆಲ್ಲಾಲಗೆ 10, ವನಿಂದು ಹಸರಂಗ 1* ರನ್ ಗಳಿಸಿದರು. ದಾಸುನ್ ಶನಕ ಶೂನ್ಯ ಸುತ್ತಿದರು.
ಇದನ್ನೂ ಓದಿ: ಟಿ–20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ಬರೆದ ನ್ಯೂಜೀಲ್ಯಾಂಡ್! ಸೈಫರ್ಟ್ ಈ ಪಂದ್ಯದ ಹೀರೋ
164 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಐರ್ಲ್ಯಾಂಡ್, 19.5 ಓವರ್‌ಗಳಲ್ಲಿ 143 ರನ್ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಅನುಭವಿಸಿತು. ತಂಡದ ಪರ ಹ್ಯಾರಿ ಟೆಕ್ಟರ್ 40 ರನ್ ಗಳಿಸಿದರೆ, ಲೋರ್ಕನ್ ಟಕರ್ 21, ಕರ್ಟಿಸ್ ಕ್ಯಾಂಪರ್ 13, ಪಾಲ್ ಸ್ಟಿರ್ಲಿಂಗ್ 6, ರಾಸ್ ಅಡೈರ್ 34, ಬೆನ್ ಕ್ಯಾಲಿಟ್ಜ್ 4, ಜಾರ್ಜ್ ಡಾಕ್ರೆಲ್ 9, ಮಾರ್ಕ್ ಅಡೇರ್ 10 ರನ್ ಗಳಿಸಿದರು. ಗ್ಯಾರೆತ್ ಡೆಲಾನಿ, ಮ್ಯಾಥ್ಯೂ ಹಂಫ್ರೀಸ್ ಶೂನ್ಯ ಸುತ್ತಿದರು.
ಲಂಕಾ ಬೌಲರ್‌ಗಳಾದ ಮಹೇಶ್ ತೀಕ್ಷಣ, ವನಿಂದು ಹಸರಂಗ ತಲಾ 3 ವಿಕೆಟ್ ಕಬಳಿಸಿದರೆ, ಮಥೀಶ ಪತಿರಣ 2 ವಿಕೆಟ್, ದುನಿತ್ ವೆಲ್ಲಾಲಾಗೆ, ದುಷ್ಮಂತ ಚಮೀರ ತಲಾ 1 ವಿಕೆಟ್ ಪಡೆದರು. ಐರ್ಲ್ಯಾಂಡ್ ಬೌಲರ್‌ಗಳಾದ ಜಾರ್ಜ್ ಡಾಕ್ರೆಲ್, ಬ್ಯಾರಿ ಮೆಕಾರ್ಥಿ ತಲಾ 2 ವಿಕೆಟ್, ಗ್ಯಾರೆತ್ ಡೆಲಾನಿ, ಮಾರ್ಕ್ ಅಡೈರ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

