Breaking News

Chanakya Niti: ಪುರುಷನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಪತ್ನಿಯಿಂದ ಈ 4 ವಿಷಯಗಳನ್ನು ಗುಪ್ತವಾಗಿಡಬೇಕು

ಆಚಾರ್ಯ ಚಾಣಕ್ಯರು ಹೇಳುವ ನೀತಿಯಲ್ಲಿ ಕೆಲವೊಂದು ಸಂಸಾರಿಕ ವಿಚಾರಗಳು ಒಳಗೊಂಡಿರುತ್ತದೆ. ದಾಂಪತ್ಯದಲ್ಲಿ ಯಾವ ಮುಚ್ಚುಮರೆಯೂ ಇರಬಾರದು ಎಂಬ ಮಾತಿದೆ, ಆದರೆ ಚಾಣಕ್ಯ ನೀತಿಯ ಪ್ರಕಾರ ಈ ವಿಚಾರಗಳನ್ನು ಪತ್ನಿಯ ಜತೆಗೆ ಪತಿ ಹಂಚಿಕೊಳ್ಳಬಾರದು ಎಂಬ ಮಾತಿದೆ, ಒಂದು ವೇಳೆ ಅದನ್ನು ಹಂಚಿಕೊಂಡರೆ ಏನೆಲ್ಲ ಪರಿಣಾಮ ಉಂಟಾಗಬಹುದು ಎಂಬುದನ್ನು ಕೂಡ ಈ ನೀತಿಯಲ್ಲಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಸುಖೀ ಸಂಸಾರ ಮತ್ತು ಪುರುಷನ ಆತ್ಮಗೌರವವನ್ನು ಕಾಪಾಡಿಕೊಳ್ಳಲು ಕೆಲವು ವಿಷಯಗಳನ್ನು ಗುಪ್ತವಾಗಿಡಬೇಕು ಎಂದು ಹೇಳಿದ್ದಾರೆ. ಚಾಣಕ್ಯರ ಪ್ರಕಾರ, ಒಬ್ಬ ಪುರುಷನು ಎಷ್ಟೇ ಪ್ರೀತಿಸುವ ಹೆಂಡತಿಯಾಗಿದ್ದರೂ ಈ ಕೆಳಗಿನ 4 ವಿಷಯಗಳನ್ನು ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ.

ನಿಮ್ಮ ಅವಮಾನದ ವಿಷಯ :

Advertisement

ನಿಮಗೆ ಹೊರಗಡೆ ಎಲ್ಲಾದರೂ ಅವಮಾನವಾಗಿದ್ದರೆ ಅಥವಾ ಯಾರಾದರೂ ನಿಮ್ಮನ್ನು ಹೀಯಾಳಿಸಿದ್ದರೆ, ಆ ವಿಷಯವನ್ನು ಹೆಂಡತಿಯ ಮುಂದೆ ಹೇಳಿಕೊಳ್ಳಬೇಡಿ. ಚಾಣಕ್ಯರ ಪ್ರಕಾರ, ಆರಂಭದಲ್ಲಿ ಆಕೆ ನಿಮ್ಮ ಮೇಲೆ ಮರುಕ ತೋರಿಸಿದರೂ, ಕಾಲಕ್ರಮೇಣ ಯಾವುದಾದರೂ ಜಗಳದ ಸಂದರ್ಭದಲ್ಲಿ ಅದೇ ಅವಮಾನದ ವಿಷಯವನ್ನು ಎತ್ತಿ ನಿಮ್ಮನ್ನು ಚುಚ್ಚಿ ಮಾತನಾಡಬಹುದು. ಇದು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ.

ನಿಮ್ಮ ದೌರ್ಬಲ್ಯ ಅಥವಾ ಮಿತಿಗಳು :

ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ದೌರ್ಬಲ್ಯವಿರುತ್ತದೆ. ನಿಮ್ಮ ಹೆಂಡತಿಗೆ ನಿಮ್ಮ ದೌರ್ಬಲ್ಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದರೆ, ಆಕೆ ಅದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಅಥವಾ ಅವಶ್ಯಕತೆ ಬಿದ್ದಾಗ ನಿಮ್ಮನ್ನು ಆ ದೌರ್ಬಲ್ಯದ ಮೂಲಕ ನಿಯಂತ್ರಿಸುವ ಸಾಧ್ಯತೆ ಇರುತ್ತದೆ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬೇಡಿ!

ನಿಮ್ಮ ದಾನದ ಬಗ್ಗೆ:

ದಾನ ಎನ್ನುವುದು ಗುಪ್ತವಾಗಿದ್ದರಷ್ಟೇ ಅದಕ್ಕೊಂದು ಬೆಲೆ. ನೀವು ಯಾರಿಗಾದರೂ ಹಣದ ಸಹಾಯ ಮಾಡಿದ್ದರೆ ಅಥವಾ ದಾನ ಮಾಡಿದ್ದರೆ ಅದನ್ನು ಹೆಂಡತಿಯ ಮುಂದೆ ಹೆಚ್ಚು ಹೇಳಿಕೊಳ್ಳಬೇಡಿ. ಒಂದು ವೇಳೆ ಪತ್ನಿಗೆ ಅದು ಇಷ್ಟವಾಗದಿದ್ದರೆ, ಆಕೆ ನಿಮ್ಮ ದಾನದ ಗುಣವನ್ನು ಟೀಕಿಸಬಹುದು ಅಥವಾ ನಿಮ್ಮನ್ನು ಹಣದ ವಿಷಯದಲ್ಲಿ ನಿರ್ಬಂಧಿಸಬಹುದು.

ನಿಮ್ಮ ಹಣಕಾಸಿನ ಸಂಪೂರ್ಣ ಗುಟ್ಟು :

ಹೆಂಡತಿಗೆ ಮನೆಯ ನಿರ್ವಹಣೆಗೆ ಬೇಕಾದ ಹಣದ ಬಗ್ಗೆ ತಿಳಿದಿರಬೇಕು ನಿಜ, ಆದರೆ ನಿಮ್ಮ ಒಟ್ಟು ಸಂಪತ್ತು ಅಥವಾ ಹೂಡಿಕೆಯ ಪ್ರತಿಯೊಂದು ಗುಟ್ಟನ್ನು ಹೇಳುವುದು ಅಪಾಯಕಾರಿ ಎನ್ನುತ್ತಾರೆ ಚಾಣಕ್ಯರು. ಹಣದ ಬಗ್ಗೆ ಪತ್ನಿಗೆ ಸಂಪೂರ್ಣ ಅಧಿಕಾರ ಸಿಕ್ಕರೆ, ಆಕೆಯ ಖರ್ಚು ಮಾಡುವ ಸ್ವಭಾವ ಬದಲಾಗಬಹುದು ಅಥವಾ ನಿಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಹುದು ಎಂಬುದು ಅವರ ಅಭಿಪ್ರಾಯ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು