ಬೆಂಗಳೂರು: ನಿರ್ವಹಣೆ ಮತ್ತು ತಾಂತ್ರಿಕ ಕಾಮಗಾರಿಗಳ ಹಿನ್ನೆಲೆಯಲ್ಲಿ ಇಂದು (ಫೆಬ್ರವರಿ 11) ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ವಿದ್ಯುತ್ ವಿತರಣಾ ಸಂಸ್ಥೆ ತಿಳಿಸಿದೆ.
ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಲಕ್ಷ್ಮೀ ಲೇಔಟ್, ಕಮ್ಮನಹಳ್ಳಿ, ಶಾಂತಿನಿಕೇತನ ಶಾಲೆ ಸುತ್ತಮುತ್ತ, ಎಲೆಕ್ಟ್ರಾನಿಕ್ಸ್ ಸಿಟಿ ಹಂತ–1, ದೊಡ್ಡತೋಗೂರು, ಬೊಮ್ಮನಹಳ್ಳಿ, ಹೊಂಗಸಂದ್ರ, ಕೊಣ್ಣಪ್ಪನ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪುತ್ತೂರಿನ ಯುವಕ ಸಾವು
ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕೋರಮಂಗಲದ ವಿವಿಧ ಬ್ಲಾಕ್ಗಳು, ಜ್ಯೋತಿನಿವಾಸ್ ಕಾಲೇಜು ಪ್ರದೇಶ, ಮಡಿವಾಳ, ಆಡುಗೋಡಿ, ಸೇಂಟ್ ಜಾನ್ಸ್ ಆಸ್ಪತ್ರೆ ಸುತ್ತಮುತ್ತ, ಡಾಲರ್ ಸ್ಕೀಮ್ ಕಾಲೋನಿ, 100 ಅಡಿ ರಿಂಗ್ ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಕೋ ಲೇಔಟ್, ಎಸ್ಜಿ ಪಾಳ್ಯ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಬಂದ್ ಆಗಲಿದೆ.
ವಿದ್ಯುತ್ ವ್ಯತ್ಯಯದ ಅವಧಿಯಲ್ಲಿ ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳಿ. ಲಿಫ್ಟ್, ನೀರಿನ ಮೋಟರ್, ಐಟಿ ಸಾಧನ ಬಳಕೆಯಲ್ಲಿ ಜಾಗ್ರತೆ ವಹಿಸಿ. ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ವಿದ್ಯುತ್ ಸರಬರಾಜು ಸಹಜ ಸ್ಥಿತಿಗೆ ಮರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

