1 ಸಾವಿರ ರೂ.ಗೆ ಪತ್ನಿಯನ್ನೇ ಮಾರಿದ ಪತಿ! ಬಳಿಕ ನಡೆದಿದ್ದೇ ಅಮಾನವೀಯ ಕೃತ್ಯ

Trending News Husband sells wife for Rs 1,000 in Uttar Pradesh

ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ, ಮದುವೆ ಎಂಬ ಪವಿತ್ರ ಸಂಬಂಧಕ್ಕೆ ಕಪ್ಪು ಚುಕ್ಕೆ ತಂದಿದೆ.
ಒಬ್ಬ ವ್ಯಕ್ತಿ ತನ್ನದೇ ಪತ್ನಿಯನ್ನು ತನ್ನ ಸ್ನೇಹಿತರಿಗೆ 1,000 ರೂಪಾಯಿಗೆ ಮಾರಾಟ ಮಾಡಿದ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.

ಈ ಘಟನೆ ಫೈಜ್ ಗಂಜ್ ಬೆಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಣದ ದುರಾಸೆಗೆ ಮದುವೆಯ ಪಾವಿತ್ರ್ಯವನ್ನು ಹಾಳು ಮಾಡಲಾಗಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.

Advertisement

ಸಂತ್ರಸ್ತೆಯ ದೂರಿನ ಪ್ರಕಾರ…

ಫೆಬ್ರವರಿ 6ರಂದು, ಗ್ಯಾಸ್ ಸ್ಟವ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕ್ರೂಡೀಕರಿಸುವ ನೆಪದಲ್ಲಿ ಪತಿ ತನ್ನ ಪತ್ನಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಕರೆದುಕೊಂಡು ಹೋದ ಪತಿ, ಸುರಾನಿ–ಪಾಪ್ರಿ ಛೇದಕದ ಬಳಿ ಕಾಯುತ್ತಿದ್ದ  ಇಬ್ಬರು ಸ್ನೇಹಿತರಾದ ಪಪ್ಪು ಮತ್ತು ಬಾಲ್ಕಿಶನ್ ಅವರಿಗೆ ತನ್ನ ಪತ್ನಿಯನ್ನು ಒಪ್ಪಿಸಿದ್ದಾನೆ.

ಆರೋಪದಂತೆ, ವ್ಯಕ್ತಿ ತನ್ನ ಸ್ನೇಹಿತರಿಂದ 1,000 ರೂಪಾಯಿ ಪಡೆದು, ತನ್ನ ಹೆಂಡತಿಯನ್ನು ಅವರಿಗೆ ಒಪ್ಪಿಸಿದ್ದಾನೆ. ಬಳಿಕ ಇಬ್ಬರು ಆರೋಪಿಗಳು ಆಕೆಯನ್ನು ನಿರ್ಜನ ನೀಲಗಿರಿ ತೋಟಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಕಾಡಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

Advertisement

ಇದನ್ನೂ ಓದಿ: ಕೇರಳದ ಸ್ಪಾಗೆ ನುಗ್ಗಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ! ಭೀಕರತೆ ಬಿಚ್ಚಿಟ್ಟ ಸಂತ್ರಸ್ತೆ

ತೀವ್ರ ಆಘಾತದ ನಡುವೆಯೇ ಸಂತ್ರಸ್ತೆ ಮನೆಗೆ ತಲುಪಿ ತನ್ನ ಪತಿಯ ಬಳಿ ನಡೆದ ಘಟನೆ ವಿವರಿಸಿದಾಗ, ಪತಿಯ ಪ್ರತಿಕ್ರಿಯೆ ಆಕೆಯನ್ನು ಮತ್ತಷ್ಟು ಬೆಚ್ಚಿಬೀಳಿಸಿತ್ತು. ಈ ರೀತಿ ನಿನ್ನ ಮೂಲಕ ಹಣ ಸಂಪಾದಿಸುವ ಉದ್ದೇಶ ಹೊಂದಿದ್ದೇನೆ ಎಂದು ಅವನು ನಿರ್ಲಜ್ಜೆಯಿಂದ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ. ಭಯಭೀತಳಾದ ಮಹಿಳೆ ತನ್ನ ಸೋದರ ಮಾವನಿಗೆ ಮಾಹಿತಿ ನೀಡಿ, ನಂತರ ಪೊಲೀಸರನ್ನು ಸಂಪರ್ಕಿಸಿ ನ್ಯಾಯಕ್ಕೆ ಮೊರೆ ಹೋಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದು, ಸಾಮೂಹಿಕ ಅತ್ಯಾಚಾರ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ರಾಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಶೋಧ ಕಾರ್ಯ ಆರಂಭಿಸಿವೆ. ಈ ಘಟನೆ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಕುಟುಂಬ ವ್ಯವಸ್ಥೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು