ಮುಂಬೈ: ಮೋಸ್ಕ ಸಹೋದರರ ಸಾಹಸದಿಂದ ಇಟಲಿ ತಂಡ ಟಿ-20 ವಿಶ್ವಕಪ್‌ನ ‘ಸಿ’ ಗುಂಪಿನ ಪಂದ್ಯಾವಳಿಯಲ್ಲಿ ನೇಪಾಳದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡದ ಪರ ಆರಿಫ್ ಶೇಕ್ 27, ರೋಹಿತ್ ಪೌದೇಲ್ 23, ಆಸಿಫ್ ಶೇಕ್ 20, ಕರಣ್ ಕೆ.ಸಿ 18, ದೀಪೇಂದ್ರ ಸಿಂಗ್ ಐರಿ 17 ರನ್ ಗಳಿಸಿದರು. ಇಟಲಿ ತಂಡದ ಪರ ಕ್ರಿಶನ್ ಕಲುಗಮಗೆ 3, ಬೆನ್ ಮನೆಟಿ 2, ಅಲಿ ಹಸನ್, ಜೆಜೆ ಸ್ಮಟ್ಸ್ ಜಸ್ಪ್ರೀತ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: ಮಧುಮೇಹಿಗಳ ಮೂತ್ರವನ್ನು ಬಳಸಿಕೊಂಡು ವಿಸ್ಕಿ ತಯಾರಿಸಿದ ತಜ್ಞ
ಗುರಿ ಬೆನ್ನತ್ತಿದ ಇಟಲಿ ತಂಡ ವಿಕೆಟ್ ನಷ್ಟವಿಲ್ಲದೆ 12.4 ಓವರ್‌ಗಳಲ್ಲಿ ಗುರಿ ತಲುಪಿತು. ತಂಡದ ಪರ ಅಂತೋಣಿ ಮೋಸ್ಕ 62 ಮತ್ತು ಜಸ್ಟಿನ್ ಮೋಸ್ಕ 60 ರನ್ ಗಳಿಸಿ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು.

ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಇಟಲಿ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

