ಚೆನ್ನೈ: ಟಿ-20 ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಯುಎಸ್ಎ ತಂಡ ನೆದರ್ಲೆಂಡ್ಸ್ ತಂಡದ ವಿರುದ್ಧ 93 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.

ಇದನ್ನೂ ಓದಿ: Joe Simon passed away: ಖ್ಯಾತ ನಟ ಜೋ ಸೈಮನ್ ನಿಧನ
ತಂಡದ ಪರ ಸಾಯಿತೇಜ ಮೂಕಮಲ್ಲ 51 ಎಸೆತಗಳಲ್ಲಿ 79 ರನ್ ಗಳಿಸಿದರು. ಶುಭಂ ರಂಜಾನೆ 24 ಎಸೆತಗಳಲ್ಲಿ 48, ಮೋನಕ್ ಪಟೇಲ್ 36, ಶಯಾನ್ ಜಹಂಗೀರ್ 20 ರನ್ ಗಳಿಸಿದರು. ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡ್ 3, ಲೊಗಾನ್ ವ್ಯಾನ್ ಬೀಕ್, ಕೈಲ್ ಕ್ಲೇನ್, ಫ್ರೆಡ್ ಕ್ಲಾಸೇನ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ತಂಡ 15.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ 93 ರನ್‌ಗಳಿಂದ ಸೋಲು ಕಂಡಿತು. ತಂಡದ ಪರ ಬಾಸ್ ಡಿ ಲೀಡ್ 23, ಸ್ಕಾಟ್ ಎಡ್ವರ್ಡ್ 20, ಮ್ಯಾಕ್ಸ್ ದಾವೂದ್ 13 ರನ್ ಗಳಿಸಿದರು. ಯುಎಸ್ಎ ಪರ ಹರ್ಮೀತ್ ಸಿಂಗ್ 4, ಶೇಡ್ಲೆ ವ್ಯಾನ್ ಶ್ಕಾಲ್ವೈಕ್ 3, ಮೊಹಮ್ಮದ್ ಮೊಹಿಸಿನ್ 2, ನಶ್ತೋಷ್ ಕೆಂಜಿಗೆ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

