Breaking News

ನಾವು ದುರಾದೃಷ್ಟವಂತರು: ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ನಾಯಕ ರಶೀದ್‌ ಹೀಗೇಕೆ ಹೇಳಿದರು?

Afghanistan cricket team captain Rashid Khan reacts to team's performance in T20 World Cup

ಟಿ20 ವಿಶ್ವಕಪ್ 2026ರಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಅಫ್ಘಾನಿಸ್ತಾನ ತಂಡಕ್ಕೆ ಅದೃಷ್ಟ ಕೈಜೋಡಿಸಲಿಲ್ಲ ಎಂದು ನಾಯಕ ರಶೀದ್‌ ಖಾನ್ (Rashid Khan) ಹೇಳಿದ್ದಾರೆ. ಪ್ರಮುಖ ತಂಡಗಳ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕರೆ ಮಾತ್ರ ಸಣ್ಣ ರಾಷ್ಟ್ರಗಳ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲು ಕಂಡ ಅಫ್ಘಾನಿಸ್ತಾನ, ನಂತರ ಸೌತ್‌ ಆಫ್ರೀಕಾದ ವಿರುದ್ಧ ಎರಡು ಸೂಪರ್ ಓವರ್‌ಗಳ ಹೋರಾಟದ ಬಳಿಕ ಸೋಲು ಅನುಭವಿಸಿತು. ಇದರಿಂದ ಗುಂಪು ‘ಡಿ’ಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಹೋಗುವ ಅಂಚಿನಲ್ಲಿದೆ.

Advertisement

“ನಾವು ಕೆಟ್ಟ ಕ್ರಿಕೆಟ್ ಆಡಿಲ್ಲ. ಸ್ವಲ್ಪ ದುರಾದೃಷ್ಟವಾಯಿತು. ಕೊನೆಯ ಪಂದ್ಯದಲ್ಲಿ ನಾವು ಎರಡನೇ ಸೂಪರ್ ಓವರ್‌ವರೆಗೆ ಹೋರಾಡಿದ್ದೇವೆ. ದೊಡ್ಡ ತಂಡಗಳ ವಿರುದ್ಧ ನಿಯಮಿತವಾಗಿ ಆಡಲು ಅವಕಾಶ ಸಿಗದಿದ್ದರೆ ವಿಶ್ವಕಪ್‌ಗಳಲ್ಲಿ ಒತ್ತಡ ಹೆಚ್ಚಾಗುತ್ತದೆ” ಎಂದು ರಶೀದ್ ಹೇಳಿದರು.

ಇದನ್ನೂ ಓದಿ: T20 Worldcup: ಆಯ್ಡನ್ ಮಾಕ್ರಮ್, ನಾಯಕನ ಆಟಕ್ಕೆ ಒಲಿದ ಜಯ

ದೊಡ್ಡ ತಂಡಗಳ ವಿರುದ್ಧ ವರ್ಷಕ್ಕೆ ಒಂದೇ ಬಾರಿ, ಅದೂ ವಿಶ್ವಕಪ್‌ನಲ್ಲಿ ಮಾತ್ರ ಆಡಿದರೆ ತಪ್ಪುಗಳಿಗೆ ಅವಕಾಶ ಇರುವುದಿಲ್ಲ. “ನಾಲ್ಕು ದಿನಗಳಲ್ಲಿ ಎರಡು ಸೋಲು ಕಂಡರೆ ವಿಶ್ವಕಪ್ ಮುಗಿದಂತೇ ಆಗುತ್ತದೆ. ಈ ಒತ್ತಡ ವಿಭಿನ್ನ,” ಎಂದರು.

ಸೋಮವಾರ ಅಫ್ಘಾನಿಸ್ತಾನ ತಂಡ ಯುಎಇ ವಿರುದ್ಧ ಕಣಕ್ಕಿಳಿಯಲಿದೆ. “ಟಿ20 ಕ್ರಿಕೆಟ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್ ಅಥವಾ ಬೌಲರ್ ಉತ್ತಮ ಪ್ರದರ್ಶನ ನೀಡಿದರೆ ಪಂದ್ಯ ಕ್ಷಣದಲ್ಲಿ ಬದಲಾಗುತ್ತದೆ. ಆದ್ದರಿಂದ ನಮ್ಮ ಅತ್ಯುತ್ತಮ ಯೋಜನೆಯೊಂದಿಗೆ ಸಂಪೂರ್ಣ ಶ್ರಮ ಹಾಕಬೇಕು” ಎಂದು ರಶೀದ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸಣ್ಣ ಅಂತರದ ಸೋಲು ಕುರಿತು ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಮಾಡಿದ ಶ್ರಮ ವ್ಯರ್ಥವಾಗಿರುವಂತೆ ಅನಿಸುತ್ತಿದೆ ಎಂದರು. ಆದರೆ ಆ ಪಂದ್ಯಗಳಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ ಎಂದು ಹೇಳಿದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಅಂಚಿನಲ್ಲಿ ಇದ್ದಾಗ ಸೋಲು ಕಂಡ ಅನುಭವವನ್ನು ನೆನಪಿಸಿಕೊಂಡ ರಶೀದ್, “ಅಂತಹ ಸೋಲು ಮನಸ್ಸಿನಲ್ಲಿ ಉಳಿಯುತ್ತದೆ. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಅವರನ್ನು ಸೋಲಿಸಿ ಪ್ರತೀಕಾರ ತೀರಿಸಿಕೊಂಡಿದ್ದೇವೆ” ಎಂದರು.

ಸೋಲಿನ ನಂತರ ತಂಡದ ವಾತಾವರಣ ಹಗುರಗೊಳಿಸಲು ಅಹಮದಾಬಾದ್‌ನಲ್ಲಿ ವಿಶೇಷ ಊಟವನ್ನು ಆರ್ಡರ್ ಮಾಡಿಸಿದ್ದಾಗಿ ರಶೀದ್ ಹೇಳಿದರು. “ಡಾಲ್ ಬುಖಾರಾ, ಡಾಲ್ ಮಖಾನಿ, ತಂದೂರಿ ಚಿಕನ್ ತರಿಸಿ ಮನದ ಕೋಪವನ್ನು ಅದರಲ್ಲಿ ಹೊರಹಾಕಿದ್ದೇವೆ. ಯಾರನ್ನೂ ದೋಷಾರೋಪಣೆ ಮಾಡದೆ ಒಟ್ಟಾಗಿ ಮುಂದುವರಿಯಬೇಕು” ಎಂದು ಹೇಳಿದರು.

ಮತ್ತಷ್ಟು ಕ್ರಿಕೆಟ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು