ಚೆನ್ನೈ: ಟಿ-20 ವಿಶ್ವಕಪ್‌ನಲ್ಲಿ ಯುಎಸ್ಎ ತಂಡ ನೆಮೀಬಿಯಾ ತಂಡದ ವಿರುದ್ಧ 31 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಈಗಾಗಲೇ ವಿಶ್ವದಾಖಲೆಯ ಜಯ ಸಾಧಿಸಿರುವ ಯುಎಸ್ಎ ಟೂರ್ನಿಯ ಎರಡನೇ ಜಯ ಗಳಿಸಿದೆ. ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: ನಾವು ದುರಾದೃಷ್ಟವಂತರು: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಹೀಗೇಕೆ ಹೇಳಿದರು?
ನಿಗದಿತ 20 ಓವರ್‌ಗಳಲ್ಲಿ ಯುಎಸ್ಎ ತಂಡ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ತಂಡದ ಪರ ಸಂಜಯ್ ಕೃಷ್ಣಮೂರ್ತಿ ಅಜೇಯ 68, ಮೋನಕ್ ಪಟೇಲ್ 52, ಮಿಲಿಂದ್ ಕುಮಾರ್ 28, ಶಾಯನ್ ಜಹಂಗೀರ್ 22 ರನ್ ಗಳಿಸಿದರು. ನೆಮೀಬಿಯಾ ಪರ ವಿಲ್ಲೆಮ್ ಮೈಬರ್ಗ್ ಮತ್ತು ಗೆಹರ್ಡ್ ಎರಸ್ಮಸ್ ತಲಾ 2 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ನೆಮೀಬಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ 31 ರನ್ ಗಳ ಅಂತರದಿಂದ ಸೋಲು ಅನುಭವಿಸಿತು. ತಂಡದ ಪರ ಲೌರೆನ್ ಸ್ಟೀನ್‌ಕೆಂಪ್ 58, ಜೆಜೆ ಸ್ಮಿತ್ 31, ಲಾಫ್ಟಿ ಈಟನ್ 28 ಮತ್ತು ಜಾನ್ ಫ್ರೈಲಿಂಕ್ 19 ರನ್ ಗಳಿಸಿದರು. ಯುಎಸ್ಎ ಪರ ಶಾಡ್ಲೆ ವ್ಯಾನ್ ಶ್ಕಾಲ್ವೈಕ್ 2, ಅಲಿ ಖಾನ್, ಸೌರಭ್ ನೆಟ್ರಾವಲ್ಕರ್ ಮತ್ತು ಶುಬಂ ರಂಜಾನೆ ತಲಾ ಒಂದು ವಿಕೆಟ್ ಪಡೆದರು.
ಇದರೊಂದಿಗೆ ಯುಎಸ್ಎ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದು ನಾಲ್ಕು ಅಂಕ ಪಡೆದುಕೊಂಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

