ಮುಂಬೈ: ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಆಡಿದ ಮೂರು ಪಂದ್ಯಗಳನ್ನು ಗೆದ್ದು ವೆಸ್ಟ್ ಇಂಡೀಸ್ ತಂಡ ಮೊದಲ ತಂಡವಾಗಿ ಸೂಪರ್-8 ಗೆ ಅರ್ಹತೆ ಪಡೆಯಿತು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ವೆಸ್ಟ್ ಇಂಡೀಸ್ ತಂಡ ನೇಪಾಳ ತಂಡದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬೌಲಿಂಗ್ ಅಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: T20 Worldcup: ನೆಮೀಬಿಯಾ ತಂಡವನ್ನ ಸುಲಭವಾಗಿ ಮಣಿಸಿದ ಯುಎಸ್ಎ
ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತು. ತಂಡದ ಪರ ದೀಪೇಂದ್ರ ಸಿಂಗ್ ಐರಿ 58, ಸೊಂಪಾಲ್ ಕಮಿ 26, ಲೋಕೇಶ್ ಬಾಮ್ 13, ಗುಲ್ಶನ್ ಜಾ ಮತ್ತು ಆಸಿಫ್ ಶೇಕ್ ತಲಾ 11 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಜಾಸನ್ ಹೋಲ್ಡರ್ 4, ಅಕೀಲ್ ಹೊಸೇನ್, ಮ್ಯಾಥ್ಯು ಫೋರ್ಡ್, ಶಮರ್ ಜೋಸೆಫ್ ಮತ್ತು ರೋಸ್ಟನ್ ಚೇಸ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ 15.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಶೈ ಹೋಪ್ ಅಜೇಯ 61, ಶಿಮ್ರನ್ ಹೆಟ್ಮಯರ್ ಅಜೇಯ 46, ಬ್ರಾಡನ್ ಕಿಂಗ್ 22 ರನ್ ಗಳಿಸಿದರು. ನೇಪಾಳ ಪರ ನಂದನ್ ಯಾದವ್ ಒಂದು ವಿಕೆಟ್ ಪಡೆದರು.
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

