Breaking News

ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಲಗೇಜ್‌ ಶುಲ್ಕ ಹೆಚ್ಚಳ!

Luggage charges on KSRTC buses to increase from tomorrow in Karnataka

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್‌ ಪ್ರಯಾಣಿಕರಿಗೆ ಇಲಾಖೆಯು ಶಾಕ್‌ ನೀಡಿದ್ದು, ನಾಳೆಯಿಂದ ಲಗೇಜ್‌ ಮೇಲಿನ ಶುಲ್ಕ ಹೆಚ್ಚಳವಾಗಲಿದೆ. 30ಕೆ.ಜಿ. ವರೆಗಿನ ಲಗೇಜ್‌ಗೆ ಶುಲ್ಕದಲ್ಲಿ ಬದಲಾವಣೆಯಿಲ್ಲ. ಆದರೆ, 30ಕೆಜಿ ನಂತರದ ಲಗೇಜ್‌ ಮೇಲೆ ಶುಲ್ಕ ಏರಿಕೆಯಾಗಲಿದೆ.

ನಿಗಮದ ಪ್ರಕಟಣೆ ಪ್ರಕಾರ, ಸಾಮಾನ್ಯವಾಗಿ ಬಸ್ ಪ್ರಯಾಣ ದರ ಏರಿಕೆಯಾಗುವ ಸಂದರ್ಭದಲ್ಲೇ ಲಗೇಜ್ ದರವೂ ಪರಿಷ್ಕರಿಸಲಾಗುತ್ತದೆ. ಜನವರಿ 2025ರಲ್ಲಿ ಪ್ರಯಾಣ ದರವನ್ನು  ಶೇ.15 ಹೆಚ್ಚಿಸಲಾಗಿದ್ದರೂ, ಆಗ ಲಗೇಜ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿರಲಿಲ್ಲ. ಇದೀಗ ಆ ಬಾಕಿ ಪರಿಷ್ಕರಣೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ.

Advertisement

ಇದನ್ನೂ ಓದಿ: ರಬ್ಬರ್‌ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ; ಕೇಂದ್ರ ಸಚಿವರಿಗೆ ದಿನೇಶ್‌ ಗುಂಡೂರಾವ್‌ ಪತ್ರ

ಕೊನೆಯದಾಗಿ ಡಿಸೆಂಬರ್ 2021ರಲ್ಲಿ ಲಗೇಜ್ ದರ ಹೆಚ್ಚಿಸಲಾಗಿತ್ತು. ಈ ಬಾರಿ ಪ್ರಯಾಣ ದರ ಏರಿಕೆಯಷ್ಟೇ, ಅಂದರೆ ಶೇ.15 ಪ್ರಮಾಣದಲ್ಲಿ ಲಗೇಜ್ ದರವೂ ಹೆಚ್ಚಿಸಲಾಗಿದೆ. ಇದರಿಂದ ಹೊಸದಾಗಿ ಹೆಚ್ಚುವರಿ ಭಾರ ಹಾಕಲಾಗಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಪ್ರಯಾಣಿಕರು 30 ಕೆಜಿ ಮೀರಿದ ಲಗೇಜ್ ಹೊಂದಿದ್ದರೆ ಮಾತ್ರ ಪರಿಷ್ಕೃತ ದರ ಅನ್ವಯವಾಗಲಿದೆ. ಸಾಮಾನ್ಯ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ತೊಂದರೆ ಇಲ್ಲ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು