ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ಈ ಹಿಂದೆ ಎಂ.ಸಿ .ಎಫ್ ಎಂದು ಜನಪ್ರಿಯವಾಗಿದ್ದ ಇತ್ತೀಚೆಗಷ್ಟೇ ಮರುನಾಮಕರಣಗೊಂಡ ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ ಮಂಗಳೂರು ಘಟಕ ಪಣಂಬೂರು ಇದರ ಸುಮಾರು 9ಲಕ್ಷ ಮೊತ್ತದ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣ ಗೊಂಡ ನೂತನ ಶೌಚಾಲಯ ಹಾಗೂ ದುರಸ್ಥಿಗೊಳಿಸಲಾದ ತರಗತಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ ನಡೆಯಿತು .
ಪುತ್ತೂರಿನ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ನೂತನ ಶೌಚಾಲಯದ ಉದ್ಘಾಟನೆಯನ್ನು ನೆರವೇರಿಸಿದರು .ಮತ್ತು ಪಿ.ಪಿ.ಎಲ್ ಪಣಂಬೂರು ಇದರ ಎಚ್.ಆರ್ ವಿಭಾಗದ ಸೀನಿಯರ್ ಆಫಿಸರ್ ವಿವೇಕ್ ಕೋಟ್ಯಾನ್ ಹಾಗೂ ಪಿ.ಪಿ.ಎಲ್ ನ ಸೀನಿಯರ್ ಇಂಜಿನಿಯರ್ ರಾಕೇಶ್ ಎಂ ಕಾಮಗಾರಿಗಳ ಫಲಕ ಅನಾವರಣ ಗೊಳಿಸಿದರು .ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪಿ.ಪಿ.ಎಲ್ ಸಂಸ್ಥೆಯವರು ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಈ ಶಾಲೆಗೆ ಒದಗಿಸುವ ಮೂಲಕ ಸರಕಾರಿ ಶಾಲೆಯ ಉಳಿವಿಗೆ ಸಹಕರಿಸಿರುವುದು ಶ್ಲಾಘನೀಯ ಎಂದರು .


2024-25ನೇ ಸಾಲಿನಲ್ಲಿ ಸೋರುತ್ತಿದ್ದ ನಲಿಕಲಿಕೊಠಡಿಯ ಮೇಲ್ಛಾವಣಿಗೆ ಶೀಟು ಹೊದಿಸಲು 1.50ಲಕ್ಷ ಅನುದಾನ ಒದಗಿಸಿದ ಶಾಸಕರನ್ನು ಪೇಟ ,ಹಾರ,ಶಾಲು ,ಫಲತಾಂಬೂಲ ,ಸ್ಮರಣಿಕೆ ,ಪುಸ್ತಕ ನೀಡಿ ಅಭಿನಂದಿಸಲಾಯಿತು .ಬಳಿಕ ನೂತನ ಶೌಚಾಲಯ ಹಾಗೂ ಕಟ್ಟಡ ದುರಸ್ಥಿಗೆ 9ಲಕ್ಷ ಅನುದಾನ ಒದಗಿಸಿದ ಪಿ.ಪಿ.ಎಲ್ ಪಣಂಬೂರು ಇದರ ಪ್ರತಿನಿಧಿಗಳಾಗಿ ಆಗಮಿಸಿದ್ದ ಎಚ್.ಆರ್ ವಿಭಾಗದ ಸೀನಿಯರ್ ಆಫೀಸರ್ ವಿವೇಕ್ ಕೋಟ್ಯಾನ್ ಹಾಗೂ ಪಿ.ಪಿ.ಎಲ್ ನ ಸೀನಿಯರ್ ಇಂಜಿನಿಯರ್ ರಾಕೇಶ್ ಎಂ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು .ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿ.ಪಿ.ಎಲ್ ನ ಸಿವಿಲ್ ಇಂಜಿನಿಯರ್ ರಾಕೇಶ್ ಎಂ ಮಾತನಾಡಿ ಸರ್ಕಾರಿ ಕನ್ನಡ ಶಾಲೆಯ ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಈ ಅನುದಾನವನ್ನು ಈ ಶಾಲೆಗೆ ತರುವಲ್ಲಿ ಇಲ್ಲಿನ ಶಿಕ್ಷಕರ ಪಾತ್ರವೂ ಬಹಳಷ್ಟಿದೆ ಎಂದರು .
ನಂತರ ಕಾಮಗಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿಕೊಟ್ಟ ರಮೇಶ್ ಎಚ್ ಪೆರ್ನೆ ,ರವಿಚಂದ್ರ ಎಚ್ ಪೆರ್ನೆ ,ಗಿರೀಶ್ ಕೆ ಪೆರ್ನೆ ,ಗಣೇಶ್ ಎಚ್ ಪೆರ್ನೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು .ಇದರೊಂದಿಗೆ ದಾನಿಗಳಿಗೂ ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು .ಶಾಲೆಗೆ ಲ್ಯಾಪ್ ಟ್ಯಾ ಪ್ ಹಾಗೂ ಪ್ರಿಂಟರನ್ನು ಜೋಸ್ ಅಲುಕಾಸ್ ಸಂಸ್ಥೆಯಿಂದ ಒದಗಿಸುವಂತೆ ಮಾಡಲು ಸಹಕರಿಸಿದ ಕುಂಬ್ರ ಕ್ಲಸ್ಟರ್ ನ ನಿರ್ಗಮಿತ ಸಿ.ಆರ್.ಪಿ ಶ್ರೀಮತಿ ಶಶಿಕಲಾ ಅವರನ್ನೂ ಶಾಲು ,ಫಲತಾಂಬೂಲ ,ಹಾರ ಹಾಕಿ ಅಭಿನಂದಿಸಲಾಯಿತು .ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಶಶಿಕಲಾ ಈ ಶಾಲೆಯ ಅಭಿವೃದ್ದಿಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕರ ಶ್ರಮ ಬಹಳಷ್ಟಿದೆ ಎಂದರು.

ಎಸ್ .ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಯಶೋಧ ಅಧ್ಯಕ್ಷತೆ ವಹಿಸಿದ್ದರು .ಅಕ್ರಮ -ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ,ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ರೈ ಸಜಂಕಾಡಿ ,ಕುಮಾರ್ ,ಕಲಾವತಿ ,ಜ್ಯೋತಿ ,ಎಸ್ .ಡಿ.ಎಂ.ಸಿ ಉಪಾಧ್ಯಕ್ಷ ಇಬ್ರಾಹಿಂ ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು .ಪ್ರಭಾರ ಮುಖ್ಯಗುರು ಶ್ರೀಮತಿ ಸುಮಲತಾ ಪಿ.ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು .ಪದವೀಧರ ಶಿಕ್ಷಕ ಗಣೇಶ ನಾಯಕ್ ವಂದಿಸಿದರು ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯಾ ಕಾರ್ಯಕ್ರಮ ನಿರೂಪಿಸಿದರು .ಗೌರವ ಶಿಕ್ಷಕಿ ಶ್ರೀಮತಿ ಗಾಯತ್ರಿ ಸಹಕರಿಸಿದರು .
ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಮಾರ್ಚ್ 6 ರಿಂದ ಅಧಿವೇಶನ ಆರಂಭ; ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡನೆ!
ಗೌರವಾರ್ಪಣೆ :
ಕಂಠೀರವ ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆದ 63ಕೆ.ಜಿ.ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿರುವ ,NMMS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿಧ್ಯಾರ್ಥಿವೇತನಕ್ಕೆ ಆಯ್ಕೆಯಾದ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅಕ್ಷತಾ ಇವರನ್ನು ಶಾಲು ,ಹಾರ ಫಲತಾಂಬೂಲ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು .

ವೇದಿಕೆಯಲ್ಲಿಯೇ ಅಕ್ಷರದಾಸೋಹ ಕೊಠಡಿಯ ದುರಸ್ತಿಗೆ 3ಲಕ್ಷ ಅನುದಾನಕ್ಕೆ ಸಹಿ ಹಾಕಿದ ಶಾಸಕರು
ಮಳೆಗಾಲ ಬಂತೆಂದರೆ ಸಂಪೂರ್ಣವಾಗಿ ಸೋರುತ್ತಿರುವ 23ವರುಷಗಳ ಹಿಂದೆ ನಿರ್ಮಿಸಲಾದ ಅಕ್ಷರದಾಸೋಹ ಕೊಠಡಿಯ ದುರಸ್ಥಿಗೆ ಶಾಸಕರಿಗೆ ಮನವಿ ಸಲ್ಲಿಸಿದಾಗ ತಕ್ಷಣ ಸ್ಪಂದಿಸಿ ವೇದಿಕೆಯಲ್ಲಿಯೇ 3ಲಕ್ಷ ಅನುದಾನಕ್ಕೆ ಸಹಿ ಹಾಕಿದ್ದಾರೆ .
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

