ಪಲ್ಲಕೆಲೆ: ಟಿ-20 ವಿಶ್ವಕಪ್‌ನ ‘ಬಿ’ ಗುಂಪಿನ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಕ್ಕೆ ತಲಾ ಒಂದೊಂದು ಅಂಕ ಹಂಚಲಾಗಿದೆ. ಇದರಿಂದಾಗಿ ಜಿಂಬಾಬ್ವೆ ತಂಡ 5 ಅಂಕಗಳೊಂದಿಗೆ 7 ನೇ ತಂಡವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.
ಇದನ್ನೂ ಓದಿ: ನಮಗೆ ನ್ಯಾಯ ಒದಗಿಸಿ: ಗೃಹ ಸಚಿವರನ್ನ ಕೋರಿದ ಸುಮಂತ್ ಪೋಷಕರು

ಇಂದಿನ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಆಸ್ಟ್ರೇಲಿಯಾ ತಂಡ. ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು ಕೇವಲ 2 ಅಂಕಗಳನ್ನು ಪಡೆದುಕೊಂಡಿದೆ. ಕೊನೆಯ ಪಂದ್ಯ ಓಮನ್ ವಿರುದ್ಧ ಬಾಕಿ ಇದೆ.
ಇಂದಿನ ಪಂದ್ಯ ನಡೆದು ಐರ್ಲೆಂಡ್ ಗೆಲುವು ದಾಖಲಿಸಿ ಮತ್ತು ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಜಿಂಬಾಬ್ವೆ ತಂಡವನ್ನ ಸೋಲಿಸಿದ್ದ ಪಕ್ಷದಲ್ಲಿ ರನ್ ರೇಟ್ ಆಧಾರದ ಮೇಲೆ ಆಸ್ಟ್ರೇಲಿಯಾಗೆ ಒಂದು ಅವಕಾಶ ಇತ್ತು. ಈಗ ಎಲ್ಲಾ ಬಾಗಿಲು ಮುಚ್ಚಿದಂತಾಗಿ ಆಸ್ಟ್ರೇಲಿಯಾ ಟೂರ್ನಿಯಿಂದಲೇ ಹೊರಬಿದ್ದಿದೆ.

ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ದ ನಿರಾಯಾಸವಾಗಿ ಗೆದ್ದ ಆಸ್ಟ್ರೇಲಿಯಾ ನಂತರದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಚ್ಚರಿಯಾಗಿ ಸೋಲು ಕಂಡಿತು. ನಿನ್ನೆಯ ಪಂದ್ಯದಲ್ಲಿ ಪಥಮ್ ನಿಸಂಕ ಅವರ ಶತಕದಾಟದಿಂದ ಮತ್ತೊಂದು ಸೋಲು ಕಾಣುವಂತಾಯಿತು.
ಬಿ ಗುಂಪಿನಲ್ಲಿ 3 ಪಂದ್ಯ ಗೆದ್ದ ಶ್ರೀಲಂಕಾ ಮತ್ತು ಜಿಂಬಾಬ್ವೆ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಕೊಂಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

