ಶ್ರೀರಾಮ ವಿದ್ಯಾಕೇಂದ್ರದಲ್ಲಿ ‘ಶ್ರೀ ಗುರೂಜಿ’ ಜನ್ಮದಿನೋತ್ಸವ: ಸಾಮರಸ್ಯ ಸಹಭೋಜನದ ಮೂಲಕ ಸಾರಿದ ಮಮತೆ

ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮದಿನದ ಪ್ರಯುಕ್ತ, ಶ್ರೀರಾಮ ಶಿಶುಮಂದಿರ ಮತ್ತು ಶ್ರೀರಾಮ ಪೂರ್ವ ಗುರುಕುಲದ 1 ಮತ್ತು 2ನೇ ತರಗತಿಯ ಮಕ್ಕಳ ವಾರ್ಷಿಕೋತ್ಸವ ಹಾಗೂ ಸಾಮರಸ್ಯ ಸಹಭೋಜನ ಕಾರ್ಯಕ್ರಮವು ಫೆಬ್ರವರಿ ೧೩ರಂದು ವಿದ್ಯಾಕೇಂದ್ರದ ಆವರಣದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು.

ಸಿದ್ದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಸುಮನಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುಟಾಣಿ ಮಕ್ಕಳ ನೃತ್ಯ, ಸಂಘ ಶತಾಬ್ದಿ ನಿಮಿತ್ತ ಪ್ರದರ್ಶಿಸಿದ ಕಿರುನಾಟಕ ಮತ್ತು ಮಕ್ಕಳೇ ನಡೆಸಿಕೊಟ್ಟ ನಿರೂಪಣೆಯನ್ನು ಕಂಡು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಇಂದಿನ ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮಕ್ಕಳು ಸಂಸ್ಕೃತ ಕಲಿಯುತ್ತಿರುವುದನ್ನು ಕಂಡು ಅವರು ಸಂತಸ ವ್ಯಕ್ತಪಡಿಸಿದರು.

Advertisement

ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅತ್ಯಂತ ವಿಶೇಷ ಭಾಗವೆಂದರೆ ತಾಯಂದಿರ ಸಹಕಾರದೊಂದಿಗೆ ನಡೆದ ‘ಸಾಮರಸ್ಯ ಸಹಭೋಜನ’. ಸುಮಾರು 286 ಮನೆಗಳ ತಾಯಂದಿರು ತಮ್ಮ ಮನೆಯಿಂದಲೇ ಭೋಜನದ ಪದಾರ್ಥಗಳನ್ನು ಸಿದ್ಧಪಡಿಸಿ ಕಳುಹಿಸಿದ್ದರು. 104 ಮನೆಗಳಿಂದ ಕೊಬ್ಬರಿ ಮಿಠಾಯಿ, ೮೪ ಮನೆಗಳಿಂದ ಅನ್ನ ಹಾಗೂ 98 ಮನೆಗಳಿಂದ ಪಾಯಸವನ್ನು ಸಂಗ್ರಹಿಸಲಾಗಿತ್ತು. ಒಟ್ಟು 600ಕ್ಕೂ ಹೆಚ್ಚು ಜನರು ಒಂದಾಗಿ ಕುಳಿತು ಈ ಪ್ರೀತಿಯ ಭೋಜನವನ್ನು ಸವಿದರು.

Advertisement

ಇದನ್ನೂ ಓದಿ: ಶ್ರೀರಾಮ ಪದವಿಪೂರ್ವ ವಿದ್ಯಾಲಯ: ‘ಕುಟುಂಬ ಮಿಲನ – ವಿವೇಕ ಸಂಗಮ’ ಕಾರ್ಯಕ್ರಮದ ಸಂಭ್ರಮ

ಶ್ರೀಮತಿ ನೇತ್ರಾವತಿ (ಮಾತೃಭಾರತಿ ಸದಸ್ಯೆ) ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ರಾಜೇಶ್ವರಿ ಮಾತಾಜಿ ಅವರು ಶ್ರೀ ಗುರೂಜಿ ಮತ್ತು ಸಹಭೋಜನದ ಮಹತ್ವ ತಿಳಿಸಿದರು. ಪುಟಾಣಿ ಅನಘ ಸ್ವಾಗತಿಸಿದರೆ, ವಂಶಿಕಾ ವಂದಿಸಿದರು. ಭಗಿನಿ ದೇವಕಿ ಅವರು ಪ್ರೇರಣಾ ಗೀತೆಯನ್ನು ಹಾಡಿದರು. ಈ ಕಾರ್ಯಕ್ರಮವು ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಮಾಜದಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು