Breaking News

ಬಂಗಾರಡ್ಕ: ದಿವಂಗತ ಗೋಪಾಲ ನಾಯ್ಕ ಕುಟುಂಬಕ್ಕೆ ‘ಅರುಣ ಸಾರಥಿ’ ಸಂಘಟನೆಯಿಂದ ಧನಸಹಾಯ

ಬಂಗಾರಡ್ಕ : ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ “ಅರುಣ ಸಾರಥಿ” ಚಾಲಕರ ಸಂಘಟನೆಯು, ಇತ್ತೀಚೆಗೆ ನಿಧನರಾದ ಆಟೋ ಚಾಲಕ, ಬಂಗಾರಡ್ಕ ಪಿಲಿಗುಂಡ ನಿವಾಸಿ ಗೋಪಾಲ ನಾಯ್ಕ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಗೋಪಾಲ ನಾಯ್ಕ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಸಂಘಟನೆಯು 20,000 ರೂಪಾಯಿಗಳ ಧನಸಹಾಯವನ್ನು ಹಸ್ತಾಂತರಿಸಿತು.

ಈ ಕಾರ್ಯಕ್ರಮವು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನಡೆಯಿತು. ಅರುಣ ಸಾರಥಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸ್ವಸ್ತಿಕ್ ತಾರಿಗುಡ್ಡೆ, ಪ್ರವೀಣ್ ಕೆಮ್ಮಾಯಿ, ಯೋಗೀಶ್ ಸಂಪ್ಯ ಹಾಗೂ ಬೂತ್ ಅಧ್ಯಕ್ಷರಾದ ರಾಜು ಬಂಗಾರಡ್ಕ, ತಾರನಾಥ ಮೇಗಿನಪಂಜ ಮತ್ತು ಟ್ರಸ್ಟ್‌ನ ಕಾರ್ಯದರ್ಶಿ ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ‘ಶ್ರೀ ಗುರೂಜಿ’ ಜನ್ಮದಿನೋತ್ಸವ: ಸಾಮರಸ್ಯ ಸಹಭೋಜನದ ಮೂಲಕ ಸಾರಿದ ಮಮತೆ

ಕೇವಲ ಚಾಲಕರ ಸಂಘಟನೆಯಾಗಿ ಸೀಮಿತವಾಗದೆ, ಅಶಕ್ತರ ಪಾಲಿಗೆ ಆಸರೆಯಾಗಿರುವ “ಅರುಣ ಸಾರಥಿ” ಸಂಘಟನೆಯು ಈವರೆಗೆ ಸಮಾಜದ ವಿವಿಧ ಅಶಕ್ತ ಕುಟುಂಬಗಳಿಗೆ ಒಟ್ಟು 1,60,000 ರೂಪಾಯಿಗಳ ಧನಸಹಾಯವನ್ನು ನೀಡಿರುವುದು ಶ್ಲಾಘನೀಯ. ತಮ್ಮ ಸಂಘಟನೆಯ ಸಹೋದ್ಯೋಗಿಯ ಕುಟುಂಬಕ್ಕೆ ನೀಡಿದ ಈ ಆಸರೆ ಇತರರಿಗೂ ಪ್ರೇರಣೆಯಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು