ಅಹಮದಾಬಾದ್: ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟರ್‌ಗಳ ಅಬ್ಬರ, ಶಿವಂ ದುಬೆ ಆಲ್‌ರೌಂಡ್ ಪ್ರದರ್ಶನದಿಂದ ಭಾರತ ನೆದರ್ಲೆಂಡ್ಸ್ ತಂಡದ ವಿರುದ್ಧ ಜಯ ಸಾಧಿಸಿ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಸೂಪರ್-8 ಗೆ ಮುನ್ನಡೆಯಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸತತ ಎರಡು ಡಕ್ ಔಟಾಗಿ ನಿರಾಸೆ ಮೂಡಿಸಿದ್ದ ಅಭಿಷೇಕ್ ಶರ್ಮಾರ ಮೇಲೆ ಅಪಾರ ಭರವಸೆ ಇತ್ತು. ಆದರೆ ಈ ಪಂದ್ಯದಲ್ಲಿ ಕೂಡ ಡಕ್ ಔಟ್ ಆಗಿ ನಿರಾಸೆ ಮೂಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅಬ್ಬರದ ಆಟವಾಡಿ 66 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಸೂರ್ಯಕುಮಾರ್ 34, ತಿಲಕ್ ವರ್ಮ 31, ಹಾರ್ದಿಕ್ ಪಾಂಡ್ಯ 30, ಇಶನ್ ಕಿಶನ್ 18 ರನ್ ಗಳಿಸಿದರು. ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ನೆದರ್ಲೆಂಡ್ಸ್ ಪರ ಲೋಗನ್ ವ್ಯಾನ್ ಬೀಕ್ 3, ಆರ್ಯನ್ ದತ್ 2 ಮತ್ತು ಕೈಲ್ ಕ್ಲೀನ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: AI ಶೃಂಗಸಭೆಯಲ್ಲಿ ‘ ನಾಯಿ ರೋಬೋಟ್’ ವಿವಾದ: ಈ ನಾಯಿ ವಿಶೇಷತೆಗಳೇನು? ವಿಶ್ವವಿದ್ಯಾಲಯದ ಹೇಳಿದ್ದೇನು?
ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ತಂಡ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ 21 ರನ್‌ಗಳ ಅಂತರದಿಂದ ಸೋಲು ಕಂಡಿತು. ತಂಡದ ಪರ ಬಸ್ ಡಿ ಲೀಡ್ 33, ಜ್ಯಾಕ್ ಲಿಯೋನ್ ಕ್ಯಾಚೆಟ್ 26, ನೋಹ್ ಕೋರ್ಸ್ 25, ಮೈಕಲ್ ಲೆವಿಟ್ 24, ಕೊಲಿನ್ ಅಕ್ರಮನ್ 23 ರನ್ ಗಳಿಸಿದರು. ಭಾರತ ಪರ ವರುಣ್ ಚಕ್ರವರ್ತಿ 3, ಶಿವಂ ದುಬೆ 2, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ ಅಜೇಯವಾಗಿ ಸೂಪರ್-8 ಹಂತಕ್ಕೆ ಪ್ರವೇಶ ಪಡೆಯಿತು. ಫೆ. 22 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

