ICC Men’s T20 World Cup: ಭಾರತದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರ ನಿರಾಶಾಜನಕ ಸರಣಿ ಮುಂದುವರಿದಿದೆ. ವಿಶ್ವ ನಂ.1 ಟಿ20ಐ ಬ್ಯಾಟರ್ ಆಗಿರುವ ಅಭಿಷೇಕ್, ಈ ಟೂರ್ನಿಯಲ್ಲಿ ಇನ್ನೂ ಒಂದಕಿ ರನ್ ಗಳಿಸಲು ಸಾಧ್ಯವಾಗಿಲ್ಲ.
ಅಮೆರಿಕಾ ಮತ್ತು ಪಾಕಿಸ್ತಾನ ವಿರುದ್ಧ ಡಕ್ ಆದ ಬಳಿಕ, ಅಹಮದಾಬಾದ್ನಲ್ಲಿ ನಡೆದ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟ್ ಆಗಿದ್ದಾರೆ. ನೆದರ್ಲ್ಯಾಂಡ್ ಆಫ್ಸ್ಪಿನ್ನರ್ ಆರ್ಯನ್ ದತ್ ಬೌಲಿಂಗ್ ಮಾಡಿದ ಮೊದಲ ಓವರ್ನ ಮೂರನೇ ಎಸೆತದಲ್ಲಿ ಪುಲ್ ಶಾಟ್ ಪ್ರಯತ್ನಿಸಿದ ಅಭಿಷೇಕ್, ಸ್ಟಂಪ್ ಕಳೆದುಕೊಂಡು ಔಟ್ ಆದರು.

ಮೂರು ಪಂದ್ಯಗಳಲ್ಲಿ ಮೂರನೇ ಡಕ್ ಪಡೆದಿರುವ ಅಭಿಷೇಕ್, ಟಿ20 ವಿಶ್ವಕಪ್ನಲ್ಲಿ ಭಾರತ ಪರ ಅತಿ ಹೆಚ್ಚು ಡಕ್ ಪಡೆದ ಆಟಗಾರರ ಪಟ್ಟಿಯಲ್ಲಿ ಮಾಜಿ ಆಟಗಾರ ಆಶಿಶ್ ನೆಹ್ರಾ ಅವರ ದಾಖಲೆಯನ್ನು ಸರಿಗಟ್ಟಿದರು. ವಿಶ್ವ ಮಟ್ಟದಲ್ಲಿ ಆಹಿದ್ ಅಫ್ರಿದಿ ಮತ್ತು ತಿಲಕರತ್ನೆ ದಿಲ್ಶಾನ್ ತಲಾ ಐದು ಡಕ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: T20 Worldcup: ಬ್ಯಾಟರ್ಗಳ ಅಬ್ಬರ, ಭಾರತಕ್ಕೆ ಸತತ ನಾಲ್ಕನೇ ಜಯ

ಪಂದ್ಯದ ಮುನ್ನ ಅಭಿಷೇಕ್ ಶರ್ಮಾ ಅವರಿಗೆ ಸಲಹೆ ನೀಡಿದ್ದ ಮಾಜಿ ನಾಯಕ ಸುನಿಲ್ ಗವಾಸ್ಕರ್, “ಮೊದಲು ಒಂದು ಸಿಂಗಲ್ ತೆಗೆದುಕೊಳ್ಳಿ, ಬಳಿಕ ದೊಡ್ಡ ಶಾಟ್ಗಳಿಗೆ ಹೋಗಿ” ಎಂದು ಸಲಹೆ ನೀಡಿದ್ದರು. ಆದರೆ ಆ ಸಲಹೆ ಮೈದಾನದಲ್ಲಿ ಫಲ ನೀಡಲಿಲ್ಲ. ಅಲ್ಲದೆ, ಇವರು ವೇಗಿ ಮೊಹಮ್ಮದ್ ಸಿರಾಜ್ ಅವರ ಜೆರ್ಸಿಯನ್ನು ಧರಿಸಿ ಮೈದಾನಕ್ಕಿಳಿದಿರುವುದು ವಿಶೇಷವಾಗಿತ್ತು.
ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ಸವಾಲು ಮುಂದುವರಿದಿದೆ. ಸೂಪರ್ 8 ಹಂತಕ್ಕೂ ಮುನ್ನ ಅಭಿಷೇಕ್ ಫಾರ್ಮ್ಗೆ ಮರಳುವುದು ತಂಡಕ್ಕೆ ಅತ್ಯಗತ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

