Breaking News

ಬಂಟ್ವಾಳ: ಫೆ.20 ರಿಂದ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ

ಬಂಟ್ವಾಳ: ಗೌಡ ಸಾರಸ್ವತ ಸಮಾಜದ ಆಡಳಿತಕ್ಕೊಳಪಟ್ಟ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ಫೆ.20 ರಿಂದ ಫೆ.25ರ ವರೆಗೆ ನಡೆಯಲಿದೆ.

ವಿಶ್ವಾವಸು ನಾಮ ಸಂವತ್ಸರದ ಫಾಲ್ಗುಣ ಶುದ್ಧ ತದಿಗೆ (ಫೆ.20) ಯಿಂದ ಫಾಲ್ಗುಣ ಶುದ್ಧ ನವಮಿ (ಫೆ.25)ವರೆಗೆ ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ಶ್ರೀದೇವರ ಬ್ರಹ್ಮರಥವನ್ನು ಹೊರತೆಗೆಯಲಾಯಿತು.

Advertisement

ಇದನ್ನೂ ಓದಿ: ಪುತ್ತೂರು: ರೈತ ಕುಟುಂಬದ ಮಗಳು ದೀಪಿಕಾ ಶೆಟ್ಟಿ ನ್ಯಾಯಾಧೀಶೆಯಾಗಿ ಆಯ್ಕೆ

ಕಾರ್ಯಕ್ರಮಗಳ ವಿವರ:

ಇಂದು ಶ್ರೀ ದೇವರ ಮೃತ್ತಿಕಾರೋಹಣ ಕಾರ್ಯಕ್ರಮ ನೆರವೇರಿತು.

ಫೆ.20, ಶುಕ್ರವಾರ: ಧ್ವಜಾರೋಹಣ, ಬೆಳ್ಳಿ ಪಾಲ್ಕಿ ಹಗಲೋತ್ಸವ, ಗರುಡೋತ್ಸವ

ಫೆ.21, ಶನಿವಾರ: ಬೆಳ್ಳಿ ಪಾಲ್ಕಿ ಹಗಲೋತ್ಸವ, ಹನುಮಂತೋತ್ಸವ

ಫೆ.22, ಭಾನುವಾರ: ಬೆಳ್ಳಿ ಲಾಲ್ಕಿ ಹಗಲೋತ್ಸವ, ಚಂದ್ರಮಂಡಲ ಉತ್ಸವ

ಫೆ.23, ಸೋಮವಾರ: ಶ್ರೀ ದೇವರ ಮೂಲ ಪ್ರತಿಷ್ಠಾ ವರ್ಧಂತಿ, ಪಟ್ಟದ ದೇವರಿಗೆ ಸ್ವರ್ಣ ಪೀಠ ಸಮರ್ಪಣೆ, ಬೆಳ್ಳಿ ಪಾಲ್ಕಿ ಹಗಲೋತ್ಸವ, ಜಲಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವ

ಫೆ.24, ಮಂಗಳವಾರ: ಬ್ರಹ್ಮರಥೋತ್ಸವ

ಫೆ.25, ಬುಧವಾರ: ಅವಭೃತ ಉತ್ಸವ, ಧ್ವಜಾವರೋಹಣ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು