Breaking News

Ranaji Trophy: 11 ವರ್ಷದ ಬಳಿಕ ಫೈನಲ್ಸ್‌ಗೆ ಕರ್ನಾಟಕ ತಂಡ

ಲಖನೌ: ಬಲಿಷ್ಠ ಪ್ರದರ್ಶನ ತೋರಿದ ಕರ್ನಾಟಕ ತಂಡ 11 ವರ್ಷಗಳ ಬಳಿಕ ರಣಜಿ ಟ್ರೋಫಿಯ ಫೈನಲ್ಸ್‌ಗೆ ಪ್ರವೇಶ ಪಡೆದಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಡ್ರಾ ಸಾಧಿಸಿ, ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಹಿನ್ನಲೆ ಫೈನಲ್‌ಗೆ ಅರ್ಹತೆ ಪಡೆಯಿತು.

Advertisement

ಇದನ್ನೂ ಓದಿ: ಮನೆಯ ಸಮೃದ್ಧಿಗಾಗಿ ಮಹಿಳೆಯರು ಮಾಡಲೇಬೇಕಾದ ಪ್ರಮುಖ ಕೆಲಸಗಳೇನು?

ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ದೇವದತ್ತ್ ಪಡಿಕಲ್ ಅವರ ದ್ವಿಶತಕ (232), ಕೆ.ಎಲ್ ರಾಹುಲ್ (141) ಮತ್ತು ಸ್ಮರಣ್ ರವಿಚಂದ್ರನ್ (135) ಅವರ ಶತಕದ ನೆರವಿನಿಂದ 736 ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಉತ್ತರಾಖಂಡ 233 ರನ್‌ಗಳಿಗೆ ಸರ್ವಪತನ ಕಂಡಿತು‌.‌ 503 ರನ್ ಮುನ್ನಡೆ ಇದ್ದರೂ ಕೂಡ ಫಾಲೋ ಆನ್ ಹೇರದೆ ಕರ್ನಾಟಕ ಬ್ಯಾಟಿಂಗ್ ಮುಂದುವರೆಸಿತು‌.

ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮರಣ್ ರವಿಚಂದ್ರನ್ 127 ಮತ್ತು ಕೆ.ಎಲ್ ರಾಹುಲ್ ಅವರ 86 ರನ್‌ಗಳ ಸಹಾಯದಿಂದ 323 ರನ್ ಗಳಿಸಿ ಉತ್ತರಾಖಂಡಕ್ಕೆ 827 ರನ್‌ಗಳ ಬೃಹತ್ ಗುರಿ ನೀಡಿತು.

ಗುರಿ ಬೆನ್ನತ್ತಿದ ತಂಡ 6 ವಿಕೆಟ್ ಕಳೆದುಕೊಂಡು 260 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಕರ್ನಾಟಕ ಪೈನಲ್ಸ್‌ಗೆ ಪ್ರವೇಶ ಪಡೆಯಿತು.

ಫೆ.24 ರಂದು ಹುಬ್ಬಳ್ಳಿಯಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ರಣಜಿ ಫೈನಲ್ಸ್ ನಡೆಯಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು