ಪುತ್ತೂರು: ಅಶೋಕ್ ರೈ ಅವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಪುತ್ತೂರು ಎಸ್.ಸಿ ಕಾಂಗ್ರೆಸ್ ಘಟಕದ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ನಾಯಿಗಳು ಒಳ್ಳೆಯವರನ್ನು ಕಂಡರೂ ಬೊಗಳುತ್ತವೆ. ಕೆಟ್ಟವರನ್ನು ಕಂಡರೂ ಬೊಗಳುತ್ತವೆ. ಅದಕ್ಕೆ ಉತ್ತರ ನೀಡಬೇಕಾಗಿಲ್ಲ. ನಾರಾಯಣ ಸ್ವಾಮಿ ಅವರು ನಾಲಾಯಕ್ ಸ್ವಾಮಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದರು.

ಇದೊಂದು ರಾಜಕೀಯ ಹೇಳಿಕೆ. ಇಲ್ಲಿ ಎಲ್ಲೂ ದಲಿತ ಸಮುದಾಯದ ಹೆಸರು ಉಲ್ಲೇಖವಾಗಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಬಾಬು ಮರಿಕೆ ಹೇಳಿದರು.
ಇದನ್ನೂ ಓದಿ: T20 Worldcup: ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಆಸ್ಟ್ರೇಲಿಯಾ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಉಪ್ಪಿನಂಗಡಿಯಲ್ಲಿ ಶಾಸಕ ಅಶೋಕ್ ರೈ ವಿರುದ್ಧ ರಾಜಕೀಯ ಹೇಳಿಕೆ ನೀಡಿ ಲೇವಡಿ ಮಾಡಿದ್ದರು.
ಇದಕ್ಕೆ ಶಾಸಕರು ಕೂಡ ರಾಜಕೀಯ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ್ದಾರೆಯೇ ಹೊರತು ಎಲ್ಲೂ ಕೂಡ ಅವರು ದಲಿತ ಸಮುದಾಯವನ್ನು ನಿಂದಿಸುವ ಹೇಳಿಕೆ ನೀಡಿಲ್ಲ. ಅಶೋಕ್ ರೈ ಅವರು ತಮ್ಮ ಮಾತಿನಲ್ಲಿ ಎಲ್ಲೂ ದಲಿತ ಶಬ್ದದ ಉಲ್ಲೇಖ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ನಾರಾಯಣ ಸ್ವಾಮಿ ಪ್ರತಿಪಕ್ಷದ ನಾಯಕ ಎಂಬ ಕಾರಣಕ್ಕೆ ಅವರನ್ನು ಪುತ್ತೂರಿನ ಬಿಜೆಪಿಗರು ಭಾಷಣ ಮಾಡಲು ಕರೆದಿದ್ದಾರೇ ಹೊರತು ದಲಿತ ಮುಖಂಡ ಎಂಬ ಕಾರಣಕ್ಕಲ್ಲ. ಅದೇ ರೀತಿ ತಮ್ಮವಿರುದ್ಧ ಮಾತನಾಡಿದ ಕಾರಣ ಶಾಸಕರು ಕೂಡ ರಾಜಕೀಯ ಉತ್ತರ ನೀಡಿದ್ದಾರೆ. ಅವರು ಎಲ್ಲಿಯೂ ದಲಿತ ಶಬ್ದ ಉಲ್ಲೇಖ ಮಾಡಿಲ್ಲ ಎಂದರು.
ಬಿಜೆಪಿ ನಾಯಕರು ಅನಗತ್ಯ ವಿವಾದ ಸೃಷ್ಟಿಸಲು ಯತ್ನಿಸಿದ್ದಾರೆ. ದಲಿತರನ್ನು ಶಾಸಕರ ವಿರುದ್ಧ ಎತ್ತಿಕಟ್ಟಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಪುತ್ತೂರು ಕ್ಷೇತ್ರದ ದಲಿತ ಸಮಾಜ ಶಾಸಕರ ಜತೆಯಲ್ಲಿದೆ. ದಲಿತರ ಹೆಸರು ಬಳಸಿಕೊಂಡು ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಾಬು ಮರಿಕೆ ಹೇಳಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

