Breaking News

ಛಾವಾ ವಿಭಜನಕಾರಿ ಸಿನಿಮಾ: ಎಆರ್‌ ರೆಹಮಾನ್‌ ಹೇಳಿಕೆ ಕುರಿತು ಮೌನ ಮುರಿದ ರಿಷಿ ವೀರಮನಿ ಹೇಳಿದ್ದೇನು?

Rishi Virmani breaks silence on AR Rahman's statement on Chhaava

ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡ ಐತಿಹಾಸಿಕ ಚಿತ್ರ ಛಾವಾ (Chhaava) ಕುರಿತ ಚರ್ಚೆ ಇನ್ನೂ ಮುಂದುವರಿದಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಅವರು ಸಿನಿಮಾ ಕುರಿತು ನೀಡಿದ “ವಿಭಜನಕಾರಿ” ಹೇಳಿಕೆ ಬಗ್ಗೆ ಛಾವಾ ಚಿತ್ರದ ಕಥೆಗಾರ ರಿಷಿ ವೀರಮನಿ ಅವರು ಮೌನ ಮುರಿದಿದ್ದಾರೆ.

“ಒಂದು ಸಿನಿಮಾ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಯಾರ ಮನೋಭಾವವನ್ನೂ ಬದಲಾಯಿಸಲು ಸಾಧ್ಯವಿಲ್ಲ. ಪ್ರೇಕ್ಷಕರಿಗೆ ತಮ್ಮದೇ ಆದ ಚಿಂತನೆ ಇದೆ. ಇಷ್ಟೊಂದು ಪ್ರೇಕ್ಷಕರ ಅಭಿಮಾನ ಮತ್ತು ಆಕರ್ಷಣೆ ನಾನು ಬಹುಕಾಲದಿಂದ ನೋಡಿಲ್ಲ” ಎಂದು ಅವರು ಹೇಳಿದ್ದಾರೆ.

Advertisement

ಮರಾಠ ಸಾಮ್ರಾಜ್ಯದ ದ್ವಿತೀಯ ಆಡಳಿತಗಾರ ಸಂಬಾಜಿ ಅವರ ಜೀವನಾಧಾರಿತ ಈ ಸಿನಿಮಾ, ಪ್ರಸಿದ್ಧ ಲೇಖಕ ಶಿವಾಜಿ ಸಾವಂತ್‌ ರಚಿಸಿದ ಕಾದಂಬರಿಯ ಆಧಾರವಾಗಿದೆ. ಲಕ್ಷ್ಮಣ್‌ ಉಟೆಕರ್ ಚಿತ್ರಕ್ಕೆ ನಿರ್ದೇಶನ ನೀಡಿದ್ದಾರೆ. ಚಿತ್ರದಲ್ಲಿ ವಿಕ್ಕಿ ಕೌಶಲ್‌ ಅವರು ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ನಟಿಸಿದ್ದು, ರಶ್ಮಿಕ ಮಂದಣ್ಣ ಅವರು ಯೇಸೂಬಾಯಿ ಭೋಂಸಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಗಲ್ ಚಕ್ರವರ್ತಿ ಔರಂಗಜೇಬರ ಪಾತ್ರದಲ್ಲಿ ಅಕ್ಷಯ್‌ ಖನ್ನ  ಅಭಿನಯಿಸಿದ್ದಾರೆ.

ಇದನ್ನೂ ಓದಿ: 2ನೇ ಮದುವೆ, ಸಂಗಾತಿ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ‌ ನಟಿ ಮೇಘನಾ ರಾಜ್

ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರವು ಜಾಗತಿಕ ಮಟ್ಟದಲ್ಲಿ 807 ಕೋಟಿಗೂ ಅಧಿಕ ಗಳಿಸುವ ಮೂಲಕ 2025ರ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿತ್ತು. ಆದರೆ, ಚಿತ್ರದ ಬಿಡುಗಡೆ ಬಳಿಕ ಮಹಾರಾಷ್ಟ್ರದ ನಾಗ್ಪುರದಲ್ಲಿ ಗಲಭೆಗಳು ನಡೆದಿದ್ದವು. ಸಿನಿಮಾವು ಔರಂಗಜೇಬನ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಎ.ಆರ್. ರಹಮಾನ್, “ಚಿತ್ರದಲ್ಲಿ ಧೈರ್ಯ ತೋರಿಸುವ ಅಂಶ ಮುಖ್ಯವಾದರೂ, ಇದು ವಿಭಾಜನಕಾರಿ ಎಂದು ಹೇಳಬಹುದು. ಆದರೆ ಜನರು ಸಿನಿಮಾಗಳಿಂದ ಸುಲಭವಾಗಿ ಪ್ರಭಾವಿತರಾಗುವುದಿಲ್ಲ” ಎಂದು ಹೇಳಿದ್ದರು. ಒಟ್ಟಿನಲ್ಲಿ, ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡರೂ, ಅದರ ಸುತ್ತಲಿನ ಚರ್ಚೆಗಳು ಇನ್ನೂ ಮುಂದುವರಿದಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು