Breaking News

ಬೆಳ್ತಂಗಡಿ: ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Belthangady Pregnant woman gives birth to a baby boy in a moving ambulance Near Farangipet

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಆಂಬ್ಯುಲೆನ್ಸ್‌ನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮನೀಡಿರುವ ಘಟನೆ ನಡೆದಿದೆ.

ಬೆಳ್ತಂಗಡಿ ನಗರದ ಸುದಮುಗೇರು ನಿವಾಸಿ ಲೀಲಾವತಿ ಅವರು ಹೆರಿಗೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಲೇಡಿ ಘೋಷನ್‌ ಆಸ್-ಪತ್ರೆಗೆ ಕಳುಹಿಸಲ್ಪಟ್ಟಿದ್ದರು.

Advertisement

ಇದನ್ನೂ ಓದಿ: ಅಕ್ರಮ ಧಾರ್ಮಿಕ ಕೇಂದ್ರಗಳ ಸಕ್ರಮ, ಇದು ಕಾಂಗ್ರೆಸ್ ಪಕ್ಷದ ಹಿಂದುತ್ವ: ಅಶೋಕ್ ರೈ

ಆದರೆ, ಫರಂಗಿಪೇಟೆ ಸಮೀಪ ತಲುಪುತ್ತಿದ್ದಾಗಲೇ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಈ ಸಂದರ್ಭ ಆಂಬ್ಯುಲೆನ್ಸ್‌ನಲ್ಲಿದ್ದ ಸಿಸ್ಟರ್ ಕುಮುದ ಹಾಗೂ ಸಿಸ್ಟರ್ ಸೌಮ್ಯಾ ಎಸ್ ತಕ್ಷಣ ಚಾತುರ್ಯ ಪ್ರದರ್ಶಿಸಿ ಆಂಬ್ಯುಲೆನ್ಸ್‌ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು.

ಅತ್ಯಲ್ಪ ಸಮಯದಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಆಂಬ್ಯುಲೆನ್ಸ್ ಚಾಲಕ ದಿನೇಶ್ ಗೌಡ ಕೂಡ ಕರ್ತವ್ಯನಿಷ್ಠೆ ತೋರಿದರು. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಸ್ಥಳೀಯರು ಆರೋಗ್ಯ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು