ಪಲ್ಲಕೆಲೆ: ನಾಯಕ ಹ್ಯಾರಿ ಬ್ರೂಕ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ 2 ವಿಕೆಟ್‌ಗಳ ಜಯ ಗಳಿಸಿ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಿತು.
ಇಲ್ಲಿನ ಪಲ್ಲಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಶಿಬ್ಜಾಡ ಫರ್ಹಾನ್ ಅವರ ಅರ್ಧಶತಕ (63), ಬಾಬರ್ ಅಜಮ್ ಮತ್ತು ಫಕರ್ ಜಮಾನ್ ತಲಾ 25 ರನ್ ಮತ್ತು ಶದಾಬ್ ಖಾನ್ 23 ರನ್ ನೆರವಿನಿಂದ 164 ರನ್ ಗಳಸಿತು. ಇಂಗ್ಲೆಂಡ್ ಪರ ಲಿಯಾಮ್ ಡಾಸನ್ 3, ಜೊಫ್ರ ಆರ್ಚರ್, ಜೆಮಿ ಓವರ್‌ಟನ್ ತಲಾ 2 ಮತ್ತು ಆದಿಲ್ ರಶೀದ್ ಒಂದು ಪಡೆದರು.

ಇದನ್ನೂ ಓದಿ: T20 Worldcup: ಮಹಿಳಾ ವಿಶ್ವಕಪ್ ವೇಳಾಪಟ್ಟಿ ಪ್ರಕಟ
ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ನಾಯಕ ಹ್ಯಾರಿ ಬ್ರೂಕ್ ಅವರ ಶತಕ, ವಿಲ್ ಜಾಕ್ಸ್ 28 ರನ್ ನೆರವಿನಿಂದ ಜಯ ಸಾಧಿಸಿತು. ಆರಂಭದಲ್ಲಿ ಸತತ ವಿಕೆಟ್‌ಗಳು ಉರುಳುತ್ತಿದ್ದರೂ ಕೂಡ ನಾಯಕ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಾಕಿಸ್ತಾನ ಪರ ಶಹೀನ್ ಅಫ್ರಿದಿ 4, ಮೊಹಮ್ಮದ್ ನವಾಜ್ ಮತ್ತು ಉಸ್ಮಾನ್ ತಾರೀಖ್ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

