ಇಂದು ‘ವಿಶ್ವಾವಸು’ ನಾಮ ಸಂವತ್ಸರದ ಉತ್ತರಾಯಣ ಕಾಲದ ವಿಶೇಷ ದಿನ. ಗುರುವಾರ ಬೃಹಸ್ಪತಿಯ (ಗುರು) ವಾರವಾಗಿರುವುದರಿಂದ ಹಣಕಾಸು ಮತ್ತು ಆಧ್ಯಾತ್ಮಿಕ ಚಿಂತನೆಗೆ ಮಹತ್ವದ ದಿನವಾಗಿದೆ. ಹಾಗಾದರೆ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಏನಿದೆ?
ಮೇಷ: ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಯಶಸ್ಸು ಸಿಗಲಿದೆ. ಅನಿರೀಕ್ಷಿತ ಲಾಭದಿಂದ ಮನೆಯಲ್ಲಿ ಸಂತೋಷ ಇರಲಿದೆ.

ವೃಷಭ: ಸಾಲದ ಪ್ರಯತ್ನಗಳು ಫಲ ನೀಡುತ್ತವೆ. ಕೆಟ್ಟ ಸಂಗಡಿಗರಿಂದ ದೂರವಿರಿ, ಇಲ್ಲದಿದ್ದರೆ ಗೌರವಕ್ಕೆ ಧಕ್ಕೆ ಬರಬಹುದು.
ಮಿಥುನ: ಮನಸ್ಸಿನಲ್ಲಿ ಅತೀವ ಚಿಂತೆ ಮತ್ತು ಆತಂಕ ಇರಬಹುದು. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಕಂಡುಬರುತ್ತದೆ.

ಕಟಕ: ಶುಭ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಪ್ರಯಾಣದಿಂದ ಲಾಭ ದೊರೆಯಲಿದೆ.
ಸಿಂಹ: ಕುಟುಂಬದಲ್ಲಿ ಸಮಾಧಾನದ ವಾತಾವರಣವಿರುತ್ತದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.
ಕನ್ಯಾ: ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಮಕ್ಕಳ ಆರೋಗ್ಯ ಅಥವಾ ಶಿಕ್ಷಣದ ಬಗ್ಗೆ ಜಾಗ್ರತೆ ಇರಲಿ.
ತುಲಾ: ಪ್ರಮುಖ ವ್ಯಕ್ತಿಗಳ ಭೇಟಿ ನಿಮ್ಮ ಭವಿಷ್ಯದ ದಾರಿಯನ್ನು ಸುಲಭಗೊಳಿಸುತ್ತದೆ. ಹಳೆಯ ಸ್ನೇಹಿತರ ಭೇಟಿಯಾಗಲಿದೆ.
ವೃಶ್ಚಿಕ: ಪ್ರಯಾಣದಲ್ಲಿ ಹೆಚ್ಚಿನ ಶ್ರಮ ಮತ್ತು ವೆಚ್ಚ ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅತ್ಯಗತ್ಯ.
ಧನು : ಕೋಪವನ್ನು ನಿಯಂತ್ರಿಸದಿದ್ದರೆ ಸಂಬಂಧಗಳು ಹಾಳಾಗಬಹುದು. ಅನಾರೋಗ್ಯಕರ ಆಹಾರದಿಂದ ದೂರವಿರಿ.
ಮಕರ: ಉದ್ಯೋಗದಲ್ಲಿ ಬದಲಾವಣೆ ಮಾಡುವ ಯೋಚನೆ ಈಗ ಬೇಡ. ಕೈಗೊಂಡ ಕೆಲಸಗಳು ನಿಧಾನವಾಗಿ ಫಲ ನೀಡಲಿವೆ.
ಕುಂಭ: ಅಚಾನಕ್ ಹಣಕಾಸಿನ ನಷ್ಟ ಸಂಭವಿಸಬಹುದು. ಅತಿಯಾದ ಕೆಲಸದ ಹೊರೆಯಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು.
ಮೀನ: ನಿಮ್ಮ ಮಾತಿನ ಮೇಲೆ ಹತೋಟಿ ಇರಲಿ. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

