ಪುತ್ತೂರು: ಇಂದಿನ ಡಿಜಿಟಲ್ ಮತ್ತು ಇ-ಕಾಮರ್ಸ್ ಯುಗದಲ್ಲಿ ಗ್ರಾಹಕರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಮೋಸ ಹೋಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಯಾವುದೇ ವ್ಯವಹಾರ ನಡೆಸುವಾಗಲೂ ಗ್ರಾಹಕರು ಪೂರ್ಣ ಮಾಹಿತಿ ಪಡೆದು ಸ್ವಯಂ ಜಾಗೃತರಾಗಿರುವುದು ಅತೀ ಅಗತ್ಯ ಎಂದು ಪುತ್ತೂರಿನ ಅನಿಕೇತನ ಲಾ ಛೇಂಬರ್ಸ್ನ ನ್ಯಾಯವಾದಿ ಕೃಷ್ಣ ಪ್ರಸಾದ್ ನಡ್ಸಾರ್ ತಿಳಿಸಿದ್ದಾರೆ.
ಪುತ್ತೂರಿನ ರೋಟರಿ ಜಿ.ಎಲ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ “ಗ್ರಾಹಕ ಹಕ್ಕುಗಳು ಮತ್ತು ಹಿತರಕ್ಷಣೆ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಗ್ರಾಹಕ ಕಾಯ್ದೆಯ ವಿವಿಧ ಆಯಾಮಗಳು, ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದ ಅವರು, ಒಂದು ವೇಳೆ ಮೋಸ ಆದಲ್ಲಿ ಅಥವಾ ಹಕ್ಕುಚ್ಯುತಿಯಾದಲ್ಲಿ ಕಾನೂನು ಚೌಕಟ್ಟಿನಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಸವಿವರ ಮಾಹಿತಿ ನೀಡಿದರು.

ಇದನ್ನೂ ಓದಿ: ಅಕ್ರಮ ಧಾರ್ಮಿಕ ಕೇಂದ್ರಗಳ ಸಕ್ರಮ, ಇದು ಕಾಂಗ್ರೆಸ್ ಪಕ್ಷದ ಹಿಂದುತ್ವ: ಅಶೋಕ್ ರೈ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರೋ. ಡಾ. ಶ್ರೀಪ್ರಕಾಶ್ ಮಾತನಾಡಿ, ಜಾಗತೀಕರಣದ ಈ ಕಾಲದಲ್ಲಿ ಪ್ರತಿಯೊಬ್ಬರಿಗೂ ಗ್ರಾಹಕ ಹಕ್ಕುಗಳ ಜಾಗೃತಿ ಇರಬೇಕು. ಮೋಸ ಹೋದ ತಕ್ಷಣ ಕಾನೂನು ನೆರವು ಪಡೆಯಲು ಹಿಂಜರಿಯಬಾರದು ಎಂದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಸುಬ್ಬಪ್ಪ ಕೈಕಂಬ, ನಿವೃತ್ತ ಪ್ರಾಧ್ಯಾಪಕ ರೋ. ದತ್ತಾತ್ರೇಯ ರಾವ್ ಹಾಗೂ ಪ್ರಗತಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

