ದತ್ತು ನೀಡಿದ ಹೆತ್ತವಳು ತಾಯಿಯೇ: ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ ಮಗನಿಗೆ ಹೈಕೋರ್ಟ್ ಛೀಮಾರಿ!

ಬೆಂಗಳೂರು: ದತ್ತು ನೀಡಿದ ಮಾತ್ರಕ್ಕೆ ಹೆತ್ತ ತಾಯಿಯೊಂದಿಗಿನ ಸಂಬಂಧ ಕಡಿದುಹೋಗುವುದಿಲ್ಲ. ಜೀವನದ ಸಂಧ್ಯಾಕಾಲದಲ್ಲಿರುವ ಹೆತ್ತ ತಾಯಿಯನ್ನು ಸಲಹುವುದು ಮಗನ ಆದ್ಯ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನನ್ನು ದತ್ತು ನೀಡಿದ್ದನ್ನೇ ನೆಪವಾಗಿಟ್ಟುಕೊಂಡು ಹೆತ್ತ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ ಮಗನಿಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೇತನ್ ಎಂಬುವವರು ತಮ್ಮ ಹೆತ್ತ ತಾಯಿ ಶಿವಲಿಂಗಮ್ಮ ಅವರಿಗೆ ಜೀವನಾಂಶ ನೀಡಲು ನಿರಾಕರಿಸಿದ್ದರು. ತಾಯಿಯು ತನ್ನನ್ನು ತನ್ನ ಅಕ್ಕನಿಗೆ ದತ್ತು ನೀಡಿರುವುದರಿಂದ ತನಗೂ ಅವರಿಗೂ ಸಂಬಂಧವಿಲ್ಲ ಎಂದು ವಾದಿಸಿದ್ದರು.

Advertisement

ಇದನ್ನೂ ಓದಿ: ಇ-ಕಾಮರ್ಸ್ ಯುಗದಲ್ಲಿ ಗ್ರಾಹಕರ ಸ್ವಯಂ ಜಾಗೃತಿ ಅತ್ಯಗತ್ಯ: ನ್ಯಾಯವಾದಿ ಕೃಷ್ಣ ಪ್ರಸಾದ್ ನಡ್ಸಾರ್

“ದತ್ತು ನೀಡಿದ ಮಾತ್ರಕ್ಕೆ ಹೆತ್ತವಳಿಗೆ ಮಗನಾಗುವುದಿಲ್ಲವೇ?” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಪ್ರಶ್ನಿಸಿದೆ. ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ತಾಯಿಗೆ ಮಾಸಿಕ 8,000 ರೂಪಾಯಿ ಜೀವನಾಂಶ ಪಾವತಿಸುವಂತೆ ಮಗನಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸಿಆರ್‌ಪಿಸಿ (CrPC) ಸೆಕ್ಷನ್ 125 ಅಡಿಯಲ್ಲಿ ತಾಯಿ ತನ್ನ ಮಕ್ಕಳಿಂದ ಜೀವನಾಂಶ ಪಡೆಯಲು ಪೂರ್ಣ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Advertisement

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು