ನವದೆಹಲಿ: ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ಯುದ್ಧೋಪಕರಣಗಳ ಗುಣಮಟ್ಟದ ಬಗ್ಗೆ ಮೊದಲಿನಿಂದಲೂ ಅನುಮಾನಗಳಿದ್ದವು. ಈಗ ಇಸ್ರೇಲ್ ಮತ್ತು ಅಮೇರಿಕಾ ವಿರುದ್ಧದ ಸಂಘರ್ಷದಲ್ಲಿ ಇರಾನ್ ಅನುಭವಿಸುತ್ತಿರುವ ಹಿನ್ನಡೆಗೆ ಚೀನಾ ನಿರ್ಮಿತ ಕಳಪೆ ಶಸ್ತ್ರಾಸ್ತ್ರಗಳೇ ಕಾರಣ ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ತಾರಕಕ್ಕೇರಿದೆ. ಪಾಕಿಸ್ತಾನವು ಚೀನಾದಿಂದ ಖರೀದಿಸಿದ್ದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ತಾಂತ್ರಿಕ ದೋಷದಿಂದ ಬಳಲುತ್ತಿದ್ದರೆ, ಇರಾನ್ ಕೂಡ ಅದೇ ಹಾದಿಯಲ್ಲಿದೆ. ಇಸ್ರೇಲ್‌ನ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಚೀನಾದ ತಂತ್ರಜ್ಞಾನ ವಿಫಲವಾಗಿದೆ.
ಇರಾನ್ ತನ್ನ ವಾಯುನೆಲೆಗಳ ರಕ್ಷಣೆಗಾಗಿ ಚೀನಾದ ರಾಡಾರ್ ಮತ್ತು ಡಿಫೆನ್ಸ್ ಸಿಸ್ಟಮ್‌ಗಳನ್ನು ನಂಬಿತ್ತು. ಆದರೆ, ಇತ್ತೀಚಿನ ದಾಳಿಯ ವೇಳೆ ಇವು ವೈರಿ ಪಡೆಯ ವಿಮಾನಗಳನ್ನು ಗುರುತಿಸಲು ವಿಫಲವಾಗಿವೆ ಎನ್ನಲಾಗುತ್ತಿದೆ. ಚೀನಾ ಶಸ್ತ್ರಾಸ್ತ್ರಗಳನ್ನು ನಂಬಿ ವೆನಿಜುವೆಲಾ ಮತ್ತು ಹಲವು ಆಫ್ರಿಕನ್ ದೇಶಗಳು ಈಗಾಗಲೇ ಸಂಕಷ್ಟ ಅನುಭವಿಸಿವೆ. ಈಗ ಇರಾನ್ ಕೂಡ ಯುದ್ಧದ ಸಮಯದಲ್ಲಿ ಈ “ಬಾಳಿಕೆ ಬಾರದ” ಉಪಕರಣಗಳಿಂದಾಗಿ ಭಾರೀ ಬೆಲೆ ತೆರುತ್ತಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಖಮೇನಿ ಹತ್ಯೆಗೆ ಅಲೀಪುರ ಸ್ತಬ್ಧ; ಕಣ್ಣೀರಿಟ್ಟ ಜನರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ!
ಚೀನಾದ ಶಸ್ತ್ರಾಸ್ತ್ರಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಕಾರಣಕ್ಕೆ ಹಲವು ದೇಶಗಳು ಇವುಗಳನ್ನು ಖರೀದಿಸುತ್ತವೆ. ಆದರೆ, ಇಸ್ರೇಲ್‌ನಂತಹ ಅತ್ಯಾಧುನಿಕ ದೇಶಗಳ ಎದುರು ಇವು “ಆಟಿಕೆಗಳಂತೆ” ವರ್ತಿಸುತ್ತಿವೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಈ ವಿದ್ಯಮಾನವು ಇರಾನ್‌ಗೆ ಯುದ್ಧದಲ್ಲಿ ಭಾರಿ ಹಿನ್ನಡೆ ತಂದೊಡ್ಡಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಅಡಿ

