ಸುಳ್ಯ: ಹಲವಾರು ಆಡೆತಡೆಗಳಿಂದ ಅದೇಶವಾಗದೆ ಬಾಕಿಯಾಗಿದ್ದ ಆನೆ ಕಾರ್ಯಪಡೆಯನ್ನು ಶೀಘ್ರವಾಗಿ ರಚಿಸುವಂತೆ ಕೋರಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಬಾಕಿ ಇರುವ ಆನೆ ಕಾರ್ಯಪಡೆ ರಚನೆಗೆ ಅನುಮೋದನೆ ನೀಡಿದ್ದಾರೆ.
ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿಯಿಂದ ಹಲವು ಸಾವುಗಳು ಸಂಭವಿಸಿದೆ. ಪ್ರಸ್ತುತ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಯಿಂದ ಆನೆ ಕಾರ್ಯಪಡೆ ಅನುಮೋದನೆಗೊಳಿಸಲಾಗಿದೆ.

ಇದನ್ನೂ ಓದಿ: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ, ಆಚರಣೆಗಳನ್ನು ಉಳಿಸಿ: ಸುಳ್ಯ ಶಾಸಕರಿಗೆ ಮನವಿ
ಅದರಂತೆ, ಪ್ರಸ್ತುತ ಕಾರ್ಯಪಡೆಗೆ ಸಂಬಂಧಿಸಿದ ಕಡತವು ಹಣಕಾಸು ಇಲಾಖೆಯಲ್ಲಿ ಇರುವುದಾಗಿ ತಿಳಿದುಬಂದಿದೆ. ಹೀಗಾಗಿ ಕೂಡಲೇ ಅನುಮೋದಿಸಿ ಆನೆ ಕಾರ್ಯಪಡೆ ರಚಿಸಬೇಕು ಎಂದು ಶಾಸಕರು ಫೆ.4 ರಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

