ಬೆಂಗಳೂರು: ಜಾಗತಿಕವಾಗಿ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ, ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಪರ್ವ ಮುಂದುವರಿದಿದೆ. ನಿನ್ನೆ ಬುಧವಾರ ಗ್ರಾಮ್ಗೆ 500 ರೂ. ರಷ್ಟು ಭಾರಿ ಕುಸಿತ ಕಂಡಿದ್ದ ಬಂಗಾರದ ಬೆಲೆ, ಇಂದು ಗುರುವಾರ (ಮಾರ್ಚ್ 5) ಮತ್ತೆ 90 ರೂ. ರಷ್ಟು ಇಳಿಕೆಯಾಗಿದೆ. ಇದರೊಂದಿಗೆ 22 ಕ್ಯಾರಟ್ ಚಿನ್ನದ ಬೆಲೆ 15,000 ರೂ. ಮಟ್ಟಕ್ಕಿಂತ ಕೆಳಕ್ಕೆ ಇಳಿದಿರುವುದು ಗ್ರಾಹಕರಿಗೆ ನಿರಾಳ ತಂದಿದೆ.
22 ಕ್ಯಾರಟ್ ಚಿನ್ನಕ್ಕೆ 1 ಗ್ರಾಮ್ಗೆ 14,990 ರೂ. 10 ಗ್ರಾಮ್ ಗೆ 1,49,900 ರೂ. 24 ಕ್ಯಾರಟ್ ಚಿನ್ನಕ್ಕೆ ಒಂದು ಗ್ರಾಮ್ಗೆ 16,353 ರೂ., 10 ಗ್ರಾಮ್ಗೆ 1,63,530 ರೂ., 18 ಕ್ಯಾರಟ್ ಚಿನ್ನಕ್ಕೆ ಒಂದು ಗ್ರಾಮ್ಗೆ 12,265 ರೂ. 10 ಗ್ರಾಮ್ಗೆ 1,22,650 ರೂ.

ನಗರವಾರು 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ):
ಬೆಂಗಳೂರು: ₹14,990
ಮುಂಬೈ: ₹14,990
ಚೆನ್ನೈ: ₹15,120
ಇದನ್ನೂ ಓದಿ: ಭಾರತದ ತೈಲ ತುರ್ತು ಯೋಜನೆ: ಇರಾನ್ ಯುದ್ಧದ ನಡುವೆ ಪೆಟ್ರೋಲ್, ಡೀಸೆಲ್ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್!
ಚಿನ್ನದ ಬೆಲೆಯಲ್ಲಿ ಕುಸಿತ ಕಂಡರೂ, ಬೆಳ್ಳಿ ಬೆಲೆ ಇಂದು ಯಾವುದೇ ಬದಲಾವಣೆ ಕಂಡಿಲ್ಲ. ನಿನ್ನೆಯ ಬೆಲೆಯೇ ಮುಂದುವರಿದಿದೆ.
ಬೆಂಗಳೂರು: ಪ್ರತಿ 1 ಗ್ರಾಮ್ಗೆ ₹285 (100 ಗ್ರಾಮ್ಗೆ ₹28,500).
ತಮಿಳುನಾಡು/ಕೇರಳ: ಪ್ರತಿ 100 ಗ್ರಾಮ್ಗೆ ₹29,500 ರಷ್ಟಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

