Breaking News

India : ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ : ಹೊಸ ಕೃಷಿ ಕ್ರಾಂತಿಯ ಯುಗ

ನವದೆಹಲಿ : ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶವು ದಾಖಲೆಯ 150.18 ಮಿಲಿಯನ್ ಟನ್ ಅಕ್ಕಿ ಉತ್ಪಾದನೆ ಸಾಧಿಸಿದ್ದು, ಅದೇ ಅವಧಿಯಲ್ಲಿ ಚೀನಾದ ಉತ್ಪಾದನೆ 145.28 ಮಿಲಿಯನ್ ಟನ್ ಆಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದರು.

ಹೆಚ್ಚಿನ ಉತ್ಪಾದಕತೆ ನೀಡುವ ಬೀಜಗಳ ಅಭಿವೃದ್ಧಿಯೇ ಈ ಸಾಧನೆಗೆ ಪ್ರಮುಖ ಕಾರಣವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಪ್ರಮುಖ ಅಕ್ಕಿ ರಫ್ತುದಾರ ದೇಶವಾಗಿಯೂ ಹೊರಹೊಮ್ಮಿದೆ ಎಂದು ಅವರು ಹೇಳಿದರು. ನವದೆಹಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಭಿವೃದ್ಧಿಪಡಿಸಿದ 25 ಕ್ಷೇತ್ರ ಬೆಳೆಗಳ 184 ಸುಧಾರಿತ ತಳಿಗಳನ್ನು ಚೌಹಾನ್ ಬಿಡುಗಡೆ ಮಾಡಿದರು. ಇದರಲ್ಲಿ 122 ಧಾನ್ಯಗಳು, 13 ಎಣ್ಣೆಬೀಜಗಳು, 11 ಮೇವು ಬೆಳೆಗಳು, 6 ಸಕ್ಕರೆಕಬ್ಬು ತಳಿಗಳು, 24 ಹತ್ತಿ ತಳಿಗಳು, ಹಾಗೂ ಜ್ಯೂಟ್ ಮತ್ತು ತಂಬಾಕು ತಲಾ ಒಂದು ತಳಿ ಸೇರಿವೆ. ಈ ಸುಧಾರಿತ ಬೀಜಗಳು ಶೀಘ್ರವಾಗಿ ರೈತರ ಕೈಗೆ ತಲುಪುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದು, ಇದರಿಂದ ಉತ್ಪಾದನೆ ಹೆಚ್ಚಾಗಿ ಬೆಳೆ ಗುಣಮಟ್ಟ ಸುಧಾರಿಸುವುದಾಗಿ ತಿಳಿಸಿದರು.

Advertisement

ಇದನ್ನೂ ಓದಿ : Mangalore : ಮಾಫಿಯಾ ವಿರುದ್ಧ ಹೋರಾಡಿದ ನಿಷ್ಠಾವಂತ ಪೋಲಿಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಾ ?

ಉತ್ಪಾದಕತೆಯ ತಳಿಗಳಿಗೆ ಅನುಮೋದನೆ ದೊರೆತಿದೆ ;

ಭಾರತದ ಪ್ರಗತಿಯನ್ನು ವಿವರಿಸಿದ ಚೌಹಾನ್, ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ 3,236 ಹೆಚ್ಚಿನ ಉತ್ಪಾದಕತೆಯ ತಳಿಗಳಿಗೆ ಅನುಮೋದನೆ ದೊರೆತಿದೆ ಎಂದು ಹೇಳಿದರು. ಇದಕ್ಕೆ ಹೋಲಿಸಿದರೆ 1969ರಿಂದ 2014ರ ನಡುವೆ 3,969 ತಳಿಗಳು ಬಿಡುಗಡೆಗೊಂಡಿದ್ದವು. ಹೊಸದಾಗಿ ಅಭಿವೃದ್ಧಿಪಡಿಸಿದ ಬೀಜಗಳು ಹವಾಮಾನ ಬದಲಾವಣೆ, ಮಣ್ಣಿನ ಉಪ್ಪುತನ, ಬರ ಸೇರಿದಂತೆ ಪರಿಸರ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದ್ದು, ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುತ್ತವೆ.

ಹೊಸ ಕೃಷಿ ಕ್ರಾಂತಿಯ ಯುಗ ;

ಒಂದು ಕಾಲದಲ್ಲಿ ಆಹಾರ ಕೊರತೆಯಿಂದ ಬಳಲುತ್ತಿದ್ದ ಭಾರತ ಇಂದು ಜಗತ್ತಿನ ಪ್ರಮುಖ ಕೃಷಿ ಉತ್ಪನ್ನಗಳ ಪೂರೈಕೆದಾರ ರಾಷ್ಟ್ರವಾಗಿ ರೂಪಾಂತರಗೊಂಡಿದೆ ಎಂದು ಸಚಿವರು ಹೇಳಿದರು. ಹೆಚ್ಚಿನ ಉತ್ಪಾದಕತೆ ಹಾಗೂ ಬೀಜಗಳ ಅಭಿವೃದ್ಧಿಯಿಂದ ಆರಂಭವಾದ ಈ ಸಾಧನೆಯನ್ನು ಅವರು ಹೊಸ ಕೃಷಿ ಕ್ರಾಂತಿಯ ಯುಗ ಎಂದು ವರ್ಣಿಸಿದರು. ಐಸಿಎಆರ್‌ನ ಅಖಿಲ ಭಾರತ ಸಮನ್ವಯಿತ ಬೆಳೆ ಯೋಜನೆಗಳು, ರಾಜ್ಯ ಹಾಗೂ ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಬೀಜ ಕಂಪನಿಗಳ ಸಂಯುಕ್ತ ಪ್ರಯತ್ನಗಳೇ ಈ ಯಶಸ್ಸಿಗೆ ಕಾರಣವೆಂದು ಅವರು ಶ್ಲಾಘಿಸಿದರು

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : Daijiworld

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು