Breaking News

5,000 ಕೋಟಿ ಅಭಿವೃದ್ಧಿ ಮಾಡಿದರೂ ರಮಾನಾಥ್ ರೈ ಸೋಲು: ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

CM Siddaramaiah and B Ramanath Rai In Bantwal Kambala G1 News (1)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅಭಿವೃದ್ಧಿ ನಿಧಿ ತಂದಿದ್ದರೂ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಚುನಾವಣೆಯಲ್ಲಿ ಸೋತಿರುವುದು ನ್ಯಾಯವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 2028ರ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಿದರೆ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಜನರಿಗೆ ಕರೆ ನೀಡಿದರು.

ಬಂಟ್ವಾಳದಲ್ಲಿ ನಡೆದ 15ನೇ ವರ್ಷದ ಮೂಡೂರು–ಪಡೂರು ಜೋಡುಕರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, 2013ರಿಂದ 2018ರ ಅವಧಿಯನ್ನು ರಮಾನಾಥ್ ರೈ “ಸುವರ್ಣ ಯುಗ” ಎಂದು ಕರೆಯುತ್ತಾರೆ. ಆ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ಸುಮಾರು 5,000 ಕೋಟಿ ಅಭಿವೃದ್ಧಿ ಅನುದಾನ ತರಲಾಗಿತ್ತು ಎಂದು ಸ್ಮರಿಸಿದರು.

Advertisement

ಇದನ್ನೂ ಓದಿ: ಕಂಬಳಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ; ಬಂಟ್ವಾಳ ತಾಲೂಕು ಕ್ರೀಡಾಂಗಣಕ್ಕೆ ನಿಧಿ: ಸಿದ್ದರಾಮಯ್ಯ ಘೋಷಣೆ

“ಇಷ್ಟೊಂದು ಅಭಿವೃದ್ಧಿ ಮಾಡಿದರೂ ರೈ ಅವರನ್ನು ಸೋಲಿಸಿದ್ದು ಸರಿಯಲ್ಲ. ಅವರು ಸೋಲಬಾರದಿತ್ತು. ಅವರನ್ನು ಕ್ಷೇತ್ರದ ಜನ ಸೋಲಿಸಿದ್ದು ನನ್ನ ಅಭಿಪ್ರಾಯದಲ್ಲಿ ನ್ಯಾಯವಲ್ಲ,” ಎಂದು ಸಿದ್ದರಾಮಯ್ಯ ಹೇಳಿದರು.

ಕಂಬಳ ಜನರ ಹೃದಯದ ಕ್ರೀಡೆ

ಕಂಬಳವು ಅತ್ಯಂತ ಜನಪ್ರಿಯ ಪಾರಂಪರಿಕ ಕ್ರೀಡೆಯಾಗಿದ್ದು, ಎಲ್ಲ ಸಮುದಾಯದ ಜನರು ಇದರಲ್ಲಿ ಭಾಗವಹಿಸುತ್ತಾರೆ. ಕಂಬಳದ ಕೋಣಗಳನ್ನು ಜನರು ತಮ್ಮ ಮಕ್ಕಳಂತೆ ಸಾಕುತ್ತಾರೆ. ವಯಸ್ಸಾದ ನಂತರವೂ ಅವುಗಳನ್ನು ಬಿಡದೆ ಜೀವಂತವಾಗಿರುವವರೆಗೂ ಸಾಕುವುದು ಇಲ್ಲಿ ಜನರು ಕೋಣಗಳ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಸಿಎಂ ಹೇಳಿದರು.

ಐದು ಗ್ಯಾರಂಟಿ ಯೋಜನೆಗಳ ಉದ್ದೇಶ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಉದ್ದೇಶ ಜನರಿಗೆ ಆರ್ಥಿಕ ಶಕ್ತಿ ನೀಡುವುದು ಎಂದು ಸಿದ್ದರಾಮಯ್ಯ ಹೇಳಿದರು. 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು