ರೂರ್ಕೆಲಾ (ಒಡಿಶಾ): ವಿದ್ಯೆ ಕಲಿಸಬೇಕಾದ ಗುರುವೊಬ್ಬ ಹಾದಿ ತಪ್ಪಿ, ಶಾಲೆಯ ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಬೆಳೆಸಿ ಗ್ರಾಮಸ್ಥರಿಂದ ‘ಧರ್ಮದೇಟು’ ತಿಂದ ಘಟನೆ ಒಡಿಶಾದ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಆ ಅಡುಗೆ ಮಹಿಳೆ ಅದೇ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷನ ಪತ್ನಿಯಾಗಿದ್ದು, ಪತಿಯೇ ತನ್ನ ಪತ್ನಿಯ ರಾಸಲೀಲೆಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ರೋಹಿತ್ ಕುಮಾರ್ ರೇ (45), ಪ್ರತಿದಿನ ಬಿಸಿಯೂಟದ ನಂತರ ಅಡುಗೆ ಮಹಿಳೆಯ ಜೊತೆ ಶಾಲೆಯ ಕೊಠಡಿಯಲ್ಲೇ ಸರಸವಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಇದನ್ನು ಗಮನಿಸಿದ ಅಧ್ಯಕ್ಷರು ಮತ್ತು ಗ್ರಾಮಸ್ಥರು ಏಕಾಏಕಿ ದಾಳಿ ನಡೆಸಿದಾಗ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ರಾತ್ರಿ ಗುಡಿಸಲಿಗೆ ನುಗ್ಗಿ 90 ವರ್ಷದ ಅಜ್ಜಿ ಮೇಲೆ ಸಾಮೂಹಿಕ ಅತ್ಯಾಚಾರ
“ನನ್ನ ಪತ್ನಿಗೆ ಈತ ಮಕ್ಕಳಾಟ ಕಲಿಸುತ್ತಿದ್ದಾನೆ” ಎಂದು ಆಕ್ರೋಶಗೊಂಡ ಅಧ್ಯಕ್ಷ ಮತ್ತು ಗ್ರಾಮಸ್ಥರು, ಹೆಡ್‌ಮಾಸ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಚಪ್ಪಲಿ ಹಾರ ಹಾಕಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.ತನಿಖೆಯ ವೇಳೆ ಈ ಕಿಲಾಡಿ ಹೆಡ್‌ಮಾಸ್ಟರ್ ಈ ಹಿಂದೆ ಕೂಡ ಸಹ ಶಿಕ್ಷಕಿಯೊಬ್ಬರ ಜೊತೆ ಸರಸವಾಡಿ ಜೈಲು ಸೇರಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಶಿಕ್ಷೆ ಮುಗಿಸಿ ಇಲ್ಲಿಗೆ ವರ್ಗಾವಣೆಯಾಗಿ ಬಂದರೂ ತನ್ನ ಹಳೆಯ ಬುದ್ಧಿ ಬಿಟ್ಟಿರಲಿಲ್ಲ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

