ಮಿರ್ಜಾಪುರ : ನಾಯಿ ಕಚ್ಚಿದಾಗ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಎಷ್ಟು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದ ರ್ಜಾಪುರದ ಈ ಘಟನೆ ಸಾಕ್ಷಿಯಾಗಿದೆ. ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿಸಿಕೊಂಡಿದ್ದ ಬಾಲಕನೊಬ್ಬ ಈಗ ರೇಬೀಸ್ ಕಾಯಿಲೆಯ ಅಂತಿಮ ಹಂತ ತಲುಪಿದ್ದು, ನಾಯಿಯಂತೆ ವರ್ತಿಸುತ್ತಿದ್ದಾನೆ.
ಸುಮಾರು ನಾಲ್ಕು ತಿಂಗಳ ಹಿಂದೆ ಈ ಬಾಲಕನಿಗೆ ನಾಯಿ ಕಚ್ಚಿತ್ತು. ಆ ಸಮಯದಲ್ಲಿ ಪೋಷಕರು ಬಾಲಕನಿಗೆ ಕೇವಲ ಎರಡು ಡೋಸ್ ರೇಬೀಸ್ ಲಸಿಕೆಯನ್ನು ಮಾತ್ರ ಕೊಡಿಸಿದ್ದರು. ಲಸಿಕೆಯ ಸಂಪೂರ್ಣ ಕೋರ್ಸ್ ಮುಗಿಸದ ಕಾರಣ ವೈರಸ್ ದೇಹದಾದ್ಯಂತ ಹರಡಿದೆ.ಪ್ರಸ್ತುತ ಬಾಲಕ ರೇಬೀಸ್‌ನ ತೀವ್ರ ಲಕ್ಷಣಗಳನ್ನು ಎದುರಿಸುತ್ತಿದ್ದಾನೆ. ಆತ ನಾಯಿಯಂತೆ ಬೊಗಳುತ್ತಿದ್ದಾನೆ ಮತ್ತು ಮನುಷ್ಯರನ್ನು ಕಂಡರೆ ಕಚ್ಚಲು ಓಡುತ್ತಿದ್ದಾನೆ. ಅಷ್ಟೇ ಅಲ್ಲದೆ, ಆಹಾರ-ನೀರನ್ನು ನಿರಾಕರಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ.

ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
Boy from Mirzapur, bitten by dog 4 months ago, received only 2 rabies vaccine doses. Now barks & behaves like a dog. Doctor: incomplete course, almost no chance of survival. 💔
pic.twitter.com/kfrfsDu45x— Ghar Ke Kalesh (@gharkekalesh) March 14, 2026
ಬಾಲಕನನ್ನು ಪರೀಕ್ಷಿಸಿದ ವೈದ್ಯರು, “ಲಸಿಕೆಯ ಕೋರ್ಸ್ ಅಪೂರ್ಣವಾಗಿದೆ. ರೇಬೀಸ್ ಒಮ್ಮೆ ಮೆದುಳಿಗೆ ಹರಡಿ ಈ ಹಂತದ ಲಕ್ಷಣಗಳು ಕಾಣಿಸಿಕೊಂಡರೆ, ರೋಗಿಯು ಬದುಕುವ ಸಾಧ್ಯತೆ ಬಹುತೇಕ ಶೂನ್ಯ” ಎಂದು ತಿಳಿಸಿದ್ದಾರೆ. ರೇಬೀಸ್ ವೈರಸ್ ಕಚ್ಚಿದ ಜಾಗದಿಂದ ನರಗಳ ಮೂಲಕ ಮೆದುಳಿಗೆ ತಲುಪಲು ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು. ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ ಪ್ರಪಂಚದಲ್ಲಿ ಇದಕ್ಕೆ ಚಿಕಿತ್ಸೆಯೇ ಇಲ್ಲ. ಹಾಗಾಗಿ ನಾಯಿ, ಬೆಕ್ಕು ಅಥವಾ ಕೋತಿ ಕಚ್ಚಿದ ತಕ್ಷಣವೇ ಲಸಿಕೆಯ ಸಂಪೂರ್ಣ ಐದೂ ಡೋಸ್‌ಗಳನ್ನು ಪಡೆಯುವುದು ಕಡ್ಡಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

