ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿರುವ ಸಿಖ್ ಸಮುದಾಯದ ಯುವತಿಯರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಮೂಲದ ‘ಗ್ರೂಮಿಂಗ್ ಗ್ಯಾಂಗ್‌ಗಳು’ (Grooming Gangs) ವ್ಯವಸ್ಥಿತವಾಗಿ ಮತಾಂತರ ಅಭಿಯಾನ ನಡೆಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಅಭಿಯಾನಕ್ಕೆ ‘ಕೌರ್ ಟು ಖಾನ್’ ಎಂಬ ಹೆಸರಿಡಲಾಗಿದ್ದು, ಇದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿಖ್ ಯುವತಿಯರನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ (Love Traps), ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ‘ಖಾನ್’ ಎಂಬ ಹೆಸರಿನವರನ್ನು ಮದುವೆಯಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ ಎನ್ನಲಾಗಿದೆ.ಪಾಕಿಸ್ತಾನಿ ಮೂಲದ ಗ್ರೂಮಿಂಗ್ ಗ್ಯಾಂಗ್‌ಗಳು ಪ್ರತಿ ಸಿಖ್ ಯುವತಿಯನ್ನು ಮತಾಂತರಗೊಳಿಸಲು ಸುಮಾರು £10,000 (ಅಂದಾಜು 10 ಲಕ್ಷ ರೂಪಾಯಿ) ವರೆಗೆ ಹಣದ ಆಫರ್ ನೀಡುತ್ತಿವೆ ಎಂದು ಕೆಲವು ಮಹಿಳೆಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:
Pakistani grooming gangs are offering £10,000 to target minor Sikh girls for grooming in the UK.#Kaur2Khan https://t.co/t8gawt9Ayl pic.twitter.com/VKAlDyIuCE
— Navdeep Singh (@Navdeep_UK) March 17, 2026
ಇತ್ತೀಚೆಗೆ ಪಶ್ಚಿಮ ಲಂಡನ್‌ನ ಹೌನ್ಸ್ಲೋದಲ್ಲಿ 16 ವರ್ಷದ ಸಿಖ್ ಬಾಲಕಿಯನ್ನು ಅಪಹರಿಸಿ ಮತಾಂತರಕ್ಕೆ ಒತ್ತಡ ಹೇರಿದ ಆರೋಪ ಕೇಳಿಬಂದಿತ್ತು. ಈ ವೇಳೆ ಸುಮಾರು 200ಕ್ಕೂ ಹೆಚ್ಚು ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದರು. ಬ್ರಿಟನ್ ಪೊಲೀಸರು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಗಾಗಿ ಈ ಗ್ಯಾಂಗ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ಸಿಖ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಕಿಮ್ ಜಾಂಗ್ ಉನ್‌ಗೆ ಶೇ. 99.93ರಷ್ಟು ಮತ! ಉತ್ತರ ಕೊರಿಯಾ ಚುನಾವಣಾ ಫಲಿತಾಂಶ ಕಂಡು ಬೆಚ್ಚಿಬಿದ್ದ ಜಗತ್ತು!
ಭಾರತದಲ್ಲೂ ಈ ವಿಷಯ ಧ್ವನಿಸಿದ್ದು, ಪಂಜಾಬ್‌ನ ಬಿಜೆಪಿ ನಾಯಕರು ಈ ‘K2K’ (Kaur to Khan) ವಿದ್ಯಮಾನದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದು ಕೇವಲ ಧಾರ್ಮಿಕ ವಿಷಯವಲ್ಲ, ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಪ್ರಶ್ನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

