ಉಡುಪಿ: 20 ರೂ. ಬಾಕಿ ಗ್ಯಾಸ್ ಬಿಲ್‌ ಪಾವತಿಸಲು ಹೋಗಿ 9.78 ಲಕ್ಷ ಕಳೆದುಕೊಂಡ ಮಹಿಳೆ

Udupi cyber fraud gas bill apk scam woman loses money

ಉಡುಪಿ: ಬಾಕಿ ಗ್ಯಾಸ್‌ ಬಿಲ್‌ ಪಾವತಿಸುವಂತೆ ಬಂದ ಸಂದೇಶವನ್ನು ನಂಬಿ 20 ರೂ. ಬಾಕಿ ಪಾವತಿಸಲು ಹೋದ 64 ವರ್ಷದ ಮಹಿಳೆ 9.78 ಲಕ್ಷ ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಶಿವಳ್ಳಿ ಗ್ರಾಮದ ನಿವಾಸಿ ಮಂಗಳಾ ರವಿದಾಸ್ ನಾಯಕ್ ನೀಡಿದ ದೂರಿನ ಪ್ರಕಾರ, ಮಾರ್ಚ್ 17ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಈ ಘಟನೆ ನಡೆದಿದೆ. ಅವರ ಪತಿ ರವಿದಾಸ್ ರಾಘವೇಂದ್ರ ನಾಯಕ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದು 20 ರೂ. ಗ್ಯಾಸ್ ಬಿಲ್ ಬಾಕಿ ಇದೆ ಎಂದು ತಿಳಿಸಿ ತಕ್ಷಣ ಪಾವತಿಸಲು ಒತ್ತಾಯಿಸಲಾಗಿದೆ.

Advertisement

ಸ್ವಲ್ಪ ಸಮಯದ ನಂತರ ವಾಟ್ಸಾಪ್ ಮೂಲಕ “Mahanagar Gas Bill Update.apk” ಎಂಬ ಫೈಲ್ ಕಳುಹಿಸಲಾಗಿದ್ದು, ಅದನ್ನು ಡೌನ್‌ಲೋಡ್ ಮಾಡಿ ತೆರೆಯಲು ಸೂಚಿಸಲಾಗಿದೆ. ಇದರಿಂದ ಮೋಸದ ಜಾಲಕ್ಕೆ ಸಿಲುಕಿದ ರವಿದಾಸ್ ನಾಯಕ್ ಅವರಿಗೆ ವಂಚಕ ಬ್ಯಾಂಕ್ ವಿವರಗಳನ್ನು ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ.

ಇದನ್ನೂ ಓದಿ: ಕಾರ್ಕಳದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ರಿಕ್ಷಾ ಚಾಲಕ ಅರೆಸ್ಟ್

ಈ ವೇಳೆ Bandhan Bank, YES Bank ಮತ್ತು HDFC Bank ಖಾತೆಗಳ ಮಾಹಿತಿಯನ್ನು ಪಡೆದು ಒಟ್ಟು 9,78,036.50 ಹಣವನ್ನು ವಂಚಿಸಲಾಗಿದೆ.

ಈ ಸಂಬಂಧ ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಅಪರಿಚಿತ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಾರದು ಮತ್ತು ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು