ಬೆಂಗಳೂರು: ಭಾರತದ ವೇಗದ ರೈಲು ಸೇವೆಯ ಪ್ರತೀಕವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಕರ್ನಾಟಕದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ರಾಜ್ಯದ ನಾಲ್ಕು ವಂದೇ ಭಾರತ್ ರೈಲುಗಳ ಹೊಸ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಿದೆ.
ಪರಿಷ್ಕರಣೆಗೊಂಡ ರೈಲುಗಳಲ್ಲಿ ಕಾಚೆಗುಡ–ಯಶವಂತಪುರ (20703), ಯಶವಂತಪುರ–ಕಾಚೆಗುಡ (20704), ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು (22231) ಮತ್ತು ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ (22232) ರೈಲುಗಳು ಸೇರಿವೆ.

ಹೊಸ ವೇಳಾಪಟ್ಟಿಯ ಪ್ರಕಾರ, ಕಾಚೆಗುಡ–ಯಶವಂತಪುರ ರೈಲು ಹಿಂದೂಪುರವನ್ನು ಮಧ್ಯಾಹ್ನ 3.55ಕ್ಕೆ ತಲುಪಲಿದೆ (ಹಿಂದೆ 3.48). ಯಶವಂತಪುರ–ಕಾಚೆಗುಡ ರೈಲು ಹಿಂದೂಪುರವನ್ನು ಮಧ್ಯಾಹ್ನ 12.17ಕ್ಕೆ ತಲುಪಲಿದೆ (ಹಿಂದೆ 12.08).
ಇದನ್ನೂ ಓದಿ: ಕರ್ನಾಟಕದಲ್ಲಿ ಹೀಟ್ ವೇವ್ ಜೊತೆಗೆ ಮಳೆ ಅಲರ್ಟ್: ಹಲವು ಜಿಲ್ಲೆಗಳಿಗೆ ಎಚ್ಚರಿಕೆ
ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯವನ್ನು ಬೆಳಗ್ಗೆ 11.13ಕ್ಕೆ ತಲುಪಲಿದ್ದು, ಯಲಹಂಕ ನಿಲ್ದಾಣಕ್ಕೆ ಮಧ್ಯಾಹ್ನ 12.58ಕ್ಕೆ ಆಗಮಿಸಲಿದೆ.
ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ರೈಲು ಗುರುವಾರ ಹೊರತುಪಡಿಸಿ ಇತರ ದಿನಗಳಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಹಾಗೂ ಕಾರ್ಯಾಚರಣಾ ಸುಗಮತೆಗಾಗಿ ಈ ಸಮಯ ಬದಲಾವಣೆ ಮಾಡಲಾಗಿದೆ. ವಂದೇ ಭಾರತ್ ರೈಲುಗಳು ಐಷಾರಾಮಿ ಮತ್ತು ವೇಗದ ಪ್ರಯಾಣಕ್ಕಾಗಿ ಜನಪ್ರಿಯವಾಗಿದ್ದು, ದೇಶಾದ್ಯಂತ ಈಗಾಗಲೇ 164 ರೈಲುಗಳು ಸಂಚರಿಸುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

