ಪಶ್ಚಿಮ ಏಷ್ಯಾ ಸಂಘರ್ಷ: ನಾಳೆ ಸಂಜೆ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ತುರ್ತು ಸಭೆ

ದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧ ಸದೃಶ್ಯ ಪರಿಸ್ಥಿತಿ ಮತ್ತು ಅದರ ಜಾಗತಿಕ ಪರಿಣಾಮಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಂಜೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.ಸಂಘರ್ಷದಿಂದಾಗಿ ಉಂಟಾಗಬಹುದಾದ ಆರ್ಥಿಕ ಏರಿಳಿತಗಳು, ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಮತ್ತು ಅನಿವಾಸಿ ಭಾರತೀಯರ ಸುರಕ್ಷತೆಯ ಕುರಿತು ರಾಜ್ಯಗಳ ಸನ್ನದ್ಧತೆ ಮತ್ತು ಯೋಜನೆಗಳನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ‘ಟೀಮ್ ಇಂಡಿಯಾ’ ಸ್ಫೂರ್ತಿಯೊಂದಿಗೆ ಈ ಸವಾಲನ್ನು ಎದುರಿಸುವುದು ಸಭೆಯ ಪ್ರಮುಖ ಗುರಿಯಾಗಿದೆ. ಸಂಘರ್ಷದ ಪ್ರಭಾವದಿಂದಾಗಿ ತೈಲ ಬೆಲೆ ಏರಿಕೆ ಅಥವಾ ಆಮದು-ರಫ್ತುಗಳ ಮೇಲಾಗುವ ಪರಿಣಾಮಗಳನ್ನು ಎದುರಿಸಲು ರಾಜ್ಯ ಮಟ್ಟದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

Advertisement

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು