ಬೆಂಗಳೂರು: ದಾನವು ಧರ್ಮದ ಮೂಲ. ಆದರೆ, ಅರಿವಿಲ್ಲದೆ ಮಾಡುವ ಕೆಲವು ದಾನಗಳು ನಮಗೆ ಲಾಭದ ಬದಲು ನಷ್ಟವನ್ನು ತರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿರುವ ‘ಲಕ್ಷ್ಮಿ’ ಹೊರಹೋಗುತ್ತಾಳೆ ಎಂಬ ನಂಬಿಕೆಯಿದೆ.
ದಾನ ಮಾಡಬಾರದ ಪ್ರಮುಖ ವಸ್ತುಗಳು:

ಕಸಬರಿಗಿ (ಪೊರಕೆ): ಪೊರಕೆಯನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ದಾನ ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಮತ್ತು ಸಾಲದ ಬಾಧೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಹಳಸಿದ ಆಹಾರ: ಮನೆಗೆ ಬಂದವರಿಗೆ ಯಾವಾಗಲೂ ತಾಜಾ ಆಹಾರವನ್ನೇ ನೀಡಬೇಕು. ಹಳಸಿದ ಅಥವಾ ಕೆಟ್ಟ ವಾಸನೆ ಬರುವ ಆಹಾರವನ್ನು ದಾನ ಮಾಡುವುದರಿಂದ ಮನೆಯಲ್ಲಿ ರೋಗರುಜಿನಗಳು ಮತ್ತು ಅಶಾಂತಿ ನೆಲೆಸುತ್ತದೆ.
ಚೂಪಾದ ವಸ್ತುಗಳು: ಚಾಕು, ಕತ್ತರಿ ಅಥವಾ ಸೂಜಿಯಂತಹ ಚೂಪಾದ ವಸ್ತುಗಳನ್ನು ದಾನ ಮಾಡಬಾರದು. ಇದು ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಮತ್ತು ಜಗಳಕ್ಕೆ ಕಾರಣವಾಗಬಹುದು.
ಹರಿದ ಬಟ್ಟೆಗಳು: ದಾನ ಮಾಡುವ ಬಟ್ಟೆಗಳು ಹರಿದಿರಬಾರದು ಅಥವಾ ತೀರಾ ಕೊಳೆಯಾಗಿರಬಾರದು. ಉಪಯೋಗಕ್ಕೆ ಬಾರದ ಬಟ್ಟೆಗಳನ್ನು ದಾನ ಮಾಡುವುದು ದಾರಿದ್ರ್ಯಕ್ಕೆ ನಾಂದಿ ಹಾಡುತ್ತದೆ ಎಂಬ ನಂಬಿಕೆಯಿದೆ.
ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳು: ಪ್ಲಾಸ್ಟಿಕ್ ಅಥವಾ ಸ್ಟೀಲ್ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳು ಉಂಟಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಎಣ್ಣೆ (ಬಳಸಿದ ಎಣ್ಣೆ): ಶನಿ ದೋಷ ನಿವಾರಣೆಗೆ ಎಣ್ಣೆ ದಾನ ಮಾಡುವುದು ಒಳ್ಳೆಯದು, ಆದರೆ ಬಳಸಿದ ಅಥವಾ ಕಪ್ಪಾದ ಎಣ್ಣೆಯನ್ನು ಎಂದಿಗೂ ದಾನ ಮಾಡಬೇಡಿ. ಇದು ಶನಿ ದೇವರ ಕೋಪಕ್ಕೆ ಕಾರಣವಾಗಬಹುದು.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

