ಬೆಂಗಳೂರು: ನಗರದ ಶೆಟ್ಟಿಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡದ 16ನೇ ಮಹಡಿಯಿಂದ ಬಿದ್ದು 26ವರ್ಷದ ಇಂಜಿನಿಯರ್ ನಿಕ್ಷಾಪ್ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ನಿಕ್ಷಾಪ್ ಇತ್ತೀಚೆಗೆ ಯುರೋಪಿನಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಅಧ್ಯಯನವನ್ನು ಮುಗಿಸಿ ಭಾರತಕ್ಕೆ ಮರಳಿದ್ದರು. ಅಲ್ಲದೆ, ಉದ್ಯೋಗವನ್ನೂ ಹುಡುಕುತ್ತಿದ್ದರು.
ನಿಕ್ಷಾಪ್ ತನ್ನ ಹೆತ್ತವರೊಂದಿಗೆ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಅವನ ತಂದೆ ಕಿಶೋರ್ ಅಧಿಕಾರಿಗಳಿಗೆ ತನ್ನ ಮಗ ಬೆಳಗ್ಗೆ 5ಗಂಟೆ ಸುಮಾರಿಗೆ ಕರೆ ಮಾಡಿ, ಶೀಘ್ರದಲ್ಲೇ ಮನೆಗೆ ಬರುತ್ತೇನೆ ಎಂದು ಹೇಳಿದ್ದ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ: ಬಾಯ್ಲರ್ ಸ್ಫೋಟಗೊಂಡು ಮೂವರು ಸಾವು, ಆರು ಮಂದಿಗೆ ಗಾಯ
“ಬೆಳಗ್ಗೆ 8.30 ರ ಸುಮಾರಿಗೆ, ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ರವಿ ಅವರಿಂದ ನಮಗೆ ಕರೆ ಬಂದು, ನೆಲ ಮಹಡಿಗೆ ಬರಲು ಕೇಳಿಕೊಂಡೆವು. ನಾವು ಬಂದಾಗ, ನಮ್ಮ ಮಗ ೧೬ ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದನ್ನು ನೋಡಿದೆವು” ಎಂದು ಕಿಶೋರ್ ಹೇಳಿದರು.
ಘಟನೆ ಸಂಬಂಧ ಬಾಗಲಗುಂಟೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಿಕ್ಷಾಪ್ ಹಲವಾರು ವರ್ಷಗಳಿಂದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ಕಿಶೋರ್ ತಮ್ಮ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

