ಮಾಗಡಿ: ಕಾನೂನಿನ ಭಯವಿಲ್ಲದ ಖದೀಮರು ಗ್ರಾಹಕರ ಸೋಗಿನಲ್ಲಿ ಬಂದು ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಗುಡ್ಡೆಮಾರನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗುಡ್ಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿಯ ಬೇಕರಿ ಮುಂಭಾಗದಲ್ಲಿ ಈ ಕೃತ್ಯ ನಡೆದಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಏನನ್ನೋ ಕೊಳ್ಳುವವರಂತೆ ಗ್ರಾಹಕರ ಸೋಗಿನಲ್ಲಿ ಮಹಿಳೆಯನ್ನು ಸಮೀಪಿಸಿದ್ದಾರೆ. ಮಹಿಳೆ ಯಾವುದೋ ಕೆಲಸದಲ್ಲಿ ನಿರತರಾಗಿದ್ದಾಗ, ಒಮ್ಮೆಲೇ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಬಾವಿ ತೋಡುವಾಗ ಅವಘಡ; ಕಾರ್ಮಿಕ ಸಾವು
ಜನನಿಬಿಡ ಪ್ರದೇಶದಲ್ಲಿ, ಅದೂ ಹಾಡಹಗಲೇ ಇಂತಹ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕಳ್ಳರು ಎಷ್ಟೊಂದು ಧೈರ್ಯಶಾಲಿಗಳಾಗಿದ್ದಾರೆ ಎಂದರೆ, ಜನವಸತಿ ಪ್ರದೇಶದಲ್ಲೂ ಮೋಸದ ಹಾದಿ ಹಿಡಿದು ಅಮಾಯಕರನ್ನು ಗುರಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಸಿಸಿಟಿವಿ (CCTV) ಕಣ್ಗಾವಲು ಮತ್ತು ಪೊಲೀಸ್ ಗಸ್ತು ಕೊರತೆಯೇ ಕಳ್ಳರಿಗೆ ವರದಾನವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
No Fear, No Law? Chain Snatchers Loot Woman in Broad Daylight
Two thieves, posing as customers, carried out a chain-snatching incident in Magadi taluk. The crime took place at Guddemaranahalli in Kuduru Hobli, near the hand post and in front of a bakery, on Friday afternoon. The… pic.twitter.com/1LYdcatSzz
— Karnataka Portfolio (@karnatakaportf) March 28, 2026
ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

