ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಗಂಗಾಧರ್ ಶೇಂದ್ರೆಕಾರ್ ವೀರಕಂಭ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾರ್ಚ್ 24ರಂದು ನಡೆದ ದೇವಸ್ಥಾನದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು 150ಕ್ಕೂ ಹೆಚ್ಚು ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಒಟ್ಟು 9 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಬಂಟ್ವಾಳ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ, ಪಲ್ಲಕ್ಕಿ ಉತ್ಸವ, ನೃತ್ಯ-ನಾಟಕ ಮೆರುಗು
ಆಯ್ಕೆಯಾದ ಸದಸ್ಯರು
- ವಿಕಾಸ್ ಬೋರ್ಕಾರ್ ಪುತ್ತೂರು
- ವಾಣಿ ವೇಣುಗೋಪಾಲ ಕಾಮತ್ ಪುಚ್ಚೆಕೆರೆ
- ಗಂಗಾಧರ ಶೇಂದ್ರೆಕಾರ್ ವೀರಕಂಭ
- ಕೃಷ್ಣರಾಜ ನಾಯಕ್ ನಿರ್ಬೈಲ್
- ಸಂತೋಷ್ ನಾಯಕ್ ಗುಂಡಿಮಜಲು
- ಗೋಪಾಲಕೃಷ್ಣ ನಾಯಕ್ ಬೆಳ್ಳಾರೆ
- ಡಾ. ಮುಕುಂದ ಪ್ರಭು ನಾಡಾಜೆ
- ಪ್ರಶಾಂತ್ ನಾಯಕ್ ನೇರೋಳು
- ಸತ್ಯವತಿ ದಯಾನಂದ ನಾಯಕ್ ಕುಂಟಿಕಾನ
ಈ ಪೈಕಿ ಆಡಳಿತ ಮೊಕ್ತೇಸರರನ್ನಾಗಿ ಗಂಗಾಧರ್ ಶೇಂದ್ರೆಕಾರ್ ವೀರಕಂಭ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

