ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಹೊಸತನ್ನು ಮಾಡುವ ಉತ್ಸಾಹ, ಯಾರಿಗೆ ಲಾಭ? ಯಾರಿಗೆ ನಷ್ಟ?

ಶಾಲಿವಾಹನ ಶಕೆ 1949, ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವಾದಶೀ ತಿಥಿ. ಇಂದು ಆಶ್ಲೇಷಾ ನಕ್ಷತ್ರವಿದ್ದು, ಸೋಮವಾರದ ಶುಭ ದಿನವಾಗಿದೆ.

  • ಮೇಷ ಆದಾಯಕ್ಕಿಂತ ಖರ್ಚು ಅಧಿಕವಾಗಬಹುದು, ಬಜೆಟ್ ಕಡೆ ಗಮನವಿರಲಿ. ಕುಟುಂಬದವರ ಪ್ರೀತಿ ಲಭಿಸಿ ಮನಸ್ಸಿಗೆ ಹರ್ಷವಾಗಲಿದೆ.
  • ವೃಷಭ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಧನಾಗಮನ. ಹಳೆಯ ಸಾಲದ ಬಾಧೆ ಸ್ವಲ್ಪ ಮಟ್ಟಿಗೆ ಕಾಡಬಹುದು, ತಾಳ್ಮೆಯಿಂದಿರಿ.
  • ಮಿಥುನ ಜೀವನದ ಗುರಿಯೊಂದು ಸಾಧನೆಯಾಗಲಿದೆ. ಹಳೆಯ ಕೆಲಸಗಳು ವೇಗ ಪಡೆಯಲಿವೆ. ಸಂಗಾತಿಯಿಂದ ಆರ್ಥಿಕ ಸಹಾಯ ನಿರೀಕ್ಷಿಸಬಹುದು.
  • ಕರ್ಕಾಟಕ ಮಾತಿನಿಂದ ಮನಸ್ತಾಪವಾಗುವ ಸಾಧ್ಯತೆ ಇದೆ, ಮೌನವೇ ಲೇಸು. ಹಳೆಯ ಯೋಜನೆಗಳಿಂದ ವ್ಯವಹಾರದಲ್ಲಿ ಲಾಭ ಸಿಗಲಿದೆ.
  • ಸಿಂಹ ವ್ಯಾಪಾರದಲ್ಲಿ ಚೇತರಿಕೆ ಕಂಡುಬರಲಿದೆ. ಅಪರೂಪದ ವ್ಯಕ್ತಿಗಳ ಭೇಟಿಯಿಂದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
  • ಕನ್ಯಾ ಹೊಸ ಕೆಲಸ ಆರಂಭಿಸಲು ಸಕಾಲ. ಮಕ್ಕಳಿಗಾಗಿ ಹೊಸ ವಾಹನ ಅಥವಾ ವಸ್ತುಗಳನ್ನು ಖರೀದಿಸುವ ಯೋಗವಿದೆ.
  • ತುಲಾ ಮನೆಯ ಅಲಂಕಾರದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಅನುಭವಿಗಳ ಮಾರ್ಗದರ್ಶನ ಪಡೆದು ಮುನ್ನಡೆಯಿರಿ, ಉಡುಗೊರೆ ಲಭಿಸಬಹುದು.
  • ವೃಶ್ಚಿಕ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಕುಟುಂಬದ ಬಿರುಕುಗಳನ್ನು ಬಗೆಹರಿಸಲು ಪ್ರಯತ್ನಿಸಿ. ಖರ್ಚಿನ ಮೇಲೆ ನಿಗಾ ಇರಲಿ.
  • ಧನು ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ ಅಥವಾ ಗೌರವ ಲಭಿಸುವ ಸಾಧ್ಯತೆ ಇದೆ. ಮಕ್ಕಳ ವೃತ್ತಿಜೀವನದ ಬಗ್ಗೆ ಇದ್ದ ಆತಂಕ ದೂರವಾಗಲಿದೆ.
  • ಮಕರ ಆರೋಗ್ಯದ ಕಡೆ ಗಮನವಿರಲಿ, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಹಿರಿಯರ ಸಲಹೆಗಳು ಸಂಕಷ್ಟದಿಂದ ಪಾರು ಮಾಡಲಿವೆ.
  • ಕುಂಭ ಬಾಕಿ ಇದ್ದ ಹಣ ಕೈ ಸೇರಲಿದೆ. ಆರ್ಥಿಕ ಯೋಜನೆಗಳಿಗೆ ಉತ್ತಮ ಚಾಲನೆ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ಮನ್ನಣೆ ದೊರೆಯಲಿದೆ.
  • ಮೀನ ನಿಮ್ಮ ಕ್ರಿಯಾಶೀಲತೆಗೆ ಹೊಸ ವೇದಿಕೆ ಸಿಗಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು