ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಧನಲಾಭ; ಹೂಡಿಕೆ ವಿಚಾರದಲ್ಲಿ ಜಾಗರೂಕರಾಗಿರಿ!

ಸೂರ್ಯೋದಯ: 06:22 AM | ಸೂರ್ಯಾಸ್ತ: 06:35 PM

ರಾಹು ಕಾಲ: 15:32 – 17:04

Advertisement

ಯಮಗಂಡ ಕಾಲ: 09:25 – 10:57

ಗುಳಿಕ ಕಾಲ: 12:29 – 14:00

Advertisement

ದ್ವಾದಶ ರಾಶಿಗಳ ಫಲಫಲಗಳು:

ಮೇಷ ರಾಶಿ:

Advertisement

ನಿಮ್ಮ ಉತ್ತಮ ನಡವಳಿಕೆಯಿಂದ ಗೌರವ ಹೆಚ್ಚಾಗಲಿದೆ. ಕಚೇರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ. ಹೂಡಿಕೆ ವಿಚಾರದಲ್ಲಿ ಚರ್ಚೆ ನಡೆಸುವಿರಿ. ಹಳೆಯ ಸ್ನೇಹಿತರ ಅಥವಾ ಪ್ರೇಮಿಯ ಅನಿರೀಕ್ಷಿತ ಭೇಟಿಯಾಗಬಹುದು. ಜಾಣ್ಮೆಯ ವ್ಯವಹಾರದಿಂದ ವ್ಯಾಪಾರದಲ್ಲಿ ಲಾಭ ಗಳಿಸುವಿರಿ.

ವೃಷಭ ರಾಶಿ:

ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಅಥವಾ ಸ್ವಪ್ರತಿಷ್ಠೆ ಮೂಡಬಹುದು, ಎಚ್ಚರಿಕೆ ಇರಲಿ. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗುವರು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸಿ ಸಂತೋಷವಾಗಲಿದೆ. ಬಾಕಿ ಉಳಿದಿದ್ದ ಕೆಲಸಗಳನ್ನು ಇಂದು ಪೂರ್ಣಗೊಳಿಸುವಿರಿ.

ಮಿಥುನ ರಾಶಿ:

ಉದ್ಯಮದಲ್ಲಿ ಚುರುಕುತನದ ಅವಶ್ಯಕತೆ ಇದೆ. ಆದಾಯದ ಮೂಲಗಳು ಬಲಗೊಳ್ಳಲಿವೆ. ಕಿವಿಗೆ ಸಂಬಂಧಿಸಿದ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಬಹುದು. ಅನುಭವಸ್ಥರ ಮಾರ್ಗದರ್ಶನ ಪಡೆದು ಮುನ್ನಡೆಯಿರಿ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಕರ್ಕಾಟಕ ರಾಶಿ:

ಹಣಕಾಸಿನ ವ್ಯವಹಾರದಲ್ಲಿ ಅಥವಾ ಸಾಲದ ವಿಚಾರದಲ್ಲಿ ನೆಮ್ಮದಿ ಹಾಳಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸ್ನೇಹಿತರ ಒತ್ತಾಯಕ್ಕೆ ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಏಕತಾನತೆಯ ಜೀವನದಿಂದ ಸ್ವಲ್ಪ ಬೇಸರ ಎನಿಸಬಹುದು.

ಸಿಂಹ ರಾಶಿ:

ಇಂದು ನೀವು ಮಾಡುವ ಕಠಿಣ ಕೆಲಸವು ಭವಿಷ್ಯದಲ್ಲಿ ಉತ್ತಮ ಲಾಭ ತಂದುಕೊಡಲಿದೆ. ಕುಟುಂಬದವರೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಆದಾಯ ಹೆಚ್ಚಿಸಿಕೊಳ್ಳಲು ಹೊಸ ದಾರಿಗಳನ್ನು ಕಂಡುಕೊಳ್ಳುವಿರಿ. ಹಳೆಯ ನೆನಪುಗಳು ಮರುಕಳಿಸಲಿವೆ.

ಕನ್ಯಾ ರಾಶಿ:

ಮಾತು ಕಡಿಮೆ ಮಾಡಿ ಕೆಲಸದ ಕಡೆಗೆ ಹೆಚ್ಚು ಗಮನ ಕೊಡಿ. ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಬೇಡ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಿ ಸ್ವಲ್ಪ ಹೈರಾಣಾಗಬಹುದು. ಹಣಕಾಸಿನ ವಿಚಾರವಾಗಿ ತಂದೆಯ ಜೊತೆ ಸಣ್ಣ ಮನಸ್ತಾಪವಾಗುವ ಸಾಧ್ಯತೆ ಇದೆ.

ತುಲಾ ರಾಶಿ:

ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಭಾವನೆಗಳಿಗಿಂತ ಬುದ್ಧಿವಂತಿಕೆಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಕಾರ್ಯ ಸಾಮರ್ಥ್ಯದ ಮೇಲೆ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಕಷ್ಟದ ನಡುವೆಯೂ ಸುಖವನ್ನು ಕಾಣುವ ದಾರಿ ಹುಡುಕುವಿರಿ. ಅಮೂಲ್ಯ ವಸ್ತುಗಳ ಖರೀದಿ ಯೋಗವಿದೆ.

ವೃಶ್ಚಿಕ ರಾಶಿ:

ಆದಾಯದ ಹರಿವು ಸ್ವಲ್ಪ ಕಡಿಮೆಯಾಗಬಹುದು. ಜೀವನದಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನಿಸುವಿರಿ. ಅನಗತ್ಯ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಮನೆಯವರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಸಂತಾನ ಸುಖದ ಅನುಭವವಾಗಲಿದೆ.

ಧನು ರಾಶಿ:

ಸಕಾರಾತ್ಮಕ ಮನೋಭಾವ ನಿಮ್ಮನ್ನು ಸಮಸ್ಯೆಗಳಿಂದ ಹೊರತರುತ್ತದೆ. ಕೆಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಮಕ್ಕಳ ಗಮನ ವಿದ್ಯಾಭ್ಯಾಸದ ಕಡೆಗೆ ಇರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುವ ಕೆಲಸ ಮಾಡುವಿರಿ.

ಮಕರ ರಾಶಿ:

ವ್ಯಾಪಾರದಲ್ಲಿ ಹಠಾತ್ ಲಾಭವಾಗುವ ಸಾಧ್ಯತೆ ಇದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ. ದೂರ ಪ್ರಯಾಣದ ಯೋಜನೆ ಹಾಕುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಕುಂಭ ರಾಶಿ:

ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿಶೇಷವಾಗಿ ಆಹಾರ ಪದ್ಧತಿಯಲ್ಲಿ ಶಿಸ್ತು ಇರಲಿ.

ಮೀನ ರಾಶಿ:

ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹೂಡಿಕೆಯಿಂದ ಲಾಭ ಸಿಗಲಿದೆ. ದೈಹಿಕ ಆಯಾಸವಾಗದಂತೆ ವಿಶ್ರಾಂತಿಗೆ ಗಮನ ನೀಡಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು