IPL: ಅರ್ಧಶತಕದ ಓಟಕ್ಕೆಗೆ ಬ್ರೇಕ್! ಎಡವಿದ ‘ಸೀಸನ್ ಓಪನರ್ ಕಿಂಗ್’ ಸಂಜು ಸ್ಯಾಮ್ಸನ್‌

sanju-samson-ipl-2026-opening-match-streak-broken

ಐಪಿಎಲ್ ಇತಿಹಾಸದಲ್ಲಿ ಸೀಸನ್ ಆರಂಭದ ಪಂದ್ಯಗಳಲ್ಲಿ ಸಿಡಿಲಾಟದ ಅರ್ಧಶತಕಗಳ ಮೂಲಕ ಹೆಸರಾದ ಸಂಜು ಸ್ಯಾಮ್ಸನ್ ಅವರ ಅದ್ಭುತ ಸರಣಿ ಈ ಬಾರಿ ಅಚ್ಚರಿಯ ರೀತಿಯಲ್ಲಿ ಅಂತ್ಯ ಕಂಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಸ್ಯಾಮ್ಸನ್ ಕೇವಲ 6 ರನ್ ಗಳಿಸಿ ಔಟಾಗಿದ್ದು, ಆರು ವರ್ಷಗಳ ನಿರಂತರ ಅರ್ಧಶತಕಗಳ ದಾಖಲೆಗೆ ಬ್ರೇಕ್ ಬಿದ್ದಿದೆ.

ಆರ್‌ಆರ್ ತಂಡದ ಮಾಜಿ ನಾಯಕನಾಗಿದ್ದ ಸ್ಯಾಮ್ಸನ್, ಇದೇ ತಂಡದ ವಿರುದ್ಧ ಸಿಎಸ್‌ಕೆ ಪರ ತನ್ನ ಮೊದಲ ಪಂದ್ಯ ಆಡಿದ್ದು ವಿಶೇಷವಾಗಿತ್ತು. ಆದರೆ ನಿರೀಕ್ಷೆಗಳ ಭಾರದಲ್ಲಿದ್ದ ಅವರು, ನಾಂದ್ರೆ ಬರ್ಗರ್ ಅವರ ವೇಗದ ಬೌಲಿಂಗ್‌ಗೆ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.

2020ರಿಂದ 2025ರವರೆಗೆ ಪ್ರತೀ ಸೀಸನ್‌ನ ಮೊದಲ ಪಂದ್ಯದಲ್ಲೇ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ್ದ ಸ್ಯಾಮ್ಸನ್, ಐಪಿಎಲ್‌ನಲ್ಲಿ ‘ಸೀಸನ್ ಓಪನರ್ ಕಿಂಗ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಬಾರಿ ಆ ಸರಣಿ ಮುರಿದು ಬಿದ್ದಿದ್ದು ಅಭಿಮಾನಿಗಳಿಗೆ ಅಚ್ಚರಿಯಾಯಿತು.

ಇದನ್ನೂ ಓದಿ: Vaibhav Suryavanshi: ಸ್ಫೋಟಕ ಅರ್ಧಶತಕ: ತನ್ನದೇ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ

ಸಂಜು ಸ್ಯಾಮ್ಸನ್ ಸೀಸನ್ ಆರಂಭದ ಪಂದ್ಯಗಳ ಸಾಧನೆ (2020-2026):

  • 2020: 74 (32) vs CSK
  • 2021: 119 (63) vs PBKS
  • 2022: 55 (27) vs SRH
  • 2023: 55 (32) vs SRH
  • 2024: 82* (52) vs LSG
  • 2025: 66 (37) vs SRH
  • 2026: 6 (7) vs RR (ಸರಣಿ ಮುರಿದು ಬಿದ್ದಿತು)

ಸಂಜು ಸ್ಯಾಮ್ಸನ್ ಅವರ ಈ ದಾಖಲೆ ಸರಣಿ ಐಪಿಎಲ್‌ನಲ್ಲಿ ಅಪರೂಪದ ಸಾಧನೆಗಳಲ್ಲೊಂದು ಎಂದು ಪರಿಗಣಿಸಲಾಗಿತ್ತು. ಪ್ರತಿ ಸೀಸನ್ ಆರಂಭದಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿದ್ದುದರಿಂದ ತಂಡಕ್ಕೆ ಬಲಿಷ್ಠ ಆರಂಭ ಸಿಗುತ್ತಿತ್ತು.

ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ಸ್ಯಾಮ್ಸನ್, ಐಪಿಎಲ್ ಕಪ್ ಗೆಲ್ಲುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು. 2012ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರೂ ಪಂದ್ಯ ಆಡದೇ ಕಪ್ ಗೆದ್ದಿದ್ದರು. ನಂತರ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಇದೀಗ ಸಿಎಸ್‌ಕೆ ತಂಡದೊಂದಿಗೆ ಹೊಸ ಪ್ರಯಾಣ ಆರಂಭಿಸಿರುವ ಸ್ಯಾಮ್ಸನ್‌ಗೆ ಈ ಮೊದಲ ಪಂದ್ಯ ನಿರಾಸೆ ತಂದಿದ್ದರೂ, ಮುಂದಿನ ಪಂದ್ಯಗಳಲ್ಲಿ ಅವರು ಮತ್ತೆ ತಮ್ಮ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು