ಪುತ್ತೂರು ಉದ್ಯಮಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೇಕಪ್ ಆರ್ಟಿಸ್ಟ್ ಪತ್ನಿ ಇದಕ್ಕೆ ಕಾರಣ? ಹಲವು ಆರೋಪ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉದ್ಯಮಿ ಕಾರ್ತಿಕ್ ಪ್ರಸಾದ್ ಅವರ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಕಾರ್ತಿಕ್ ಅವರ ಪತ್ನಿ, ಮೇಕಪ್ ಆರ್ಟಿಸ್ಟ್ ಸೌಮ್ಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಈಕೆ ತನ್ನ ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಲ್ಲದೆ, ಈ ಹಿಂದೆಯೇ ಹಲವು ಮದುವೆಗಳಾಗಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.

ಕಾರ್ತಿಕ್ ಪ್ರಸಾದ್ ಅವರು ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಭಾವಿಸಲಾಗಿತ್ತು. ಆದರೆ, ಕಾರ್ತಿಕ್ ಅವರ ಕುಟುಂಬಸ್ಥರು ಈಗ ಪತ್ನಿ ಸೌಮ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸೌಮ್ಯ ತನ್ನ ಪತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದಳು ಮತ್ತು ಆತನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಳು ಎಂದು ಆರೋಪಿಸಿದ್ದಾರೆ.

Advertisement

ಸೌಮ್ಯ ಈ ಹಿಂದೆಯೇ ಮೂರ್ನಾಲ್ಕು ಮಂದಿಯನ್ನು ಮದುವೆಯಾಗಿ ವಂಚಿಸಿರುವ ಆಘಾತಕಾರಿ ಮಾಹಿತಿ ಹೊರಬರುತ್ತಿದೆ. ಪ್ರತಿ ಮದುವೆಯ ನಂತರ ಗಂಡನಿಂದ ಹಣ ಮತ್ತು ಆಸ್ತಿ ಕಸಿದುಕೊಂಡು ಅವರನ್ನು ಬಿಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಕಾರ್ತಿಕ್ ಅವರ ಸಾವಿನ ಹಿಂದೆ ಈಕೆಯ ವ್ಯವಸ್ಥಿತ ಸಂಚು ಇರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಪ್ಯಾಂಟ್ ಸಡಿಲಿಸಿ ತನ್ನ ಗುಪ್ತಾಂಗವನ್ನು ಮಹಿಳೆಯ ಕಿವಿಗೆ ತಾಗಿಸಿದ ವ್ಯಕ್ತಿ

Advertisement

ಪುತ್ತೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೌಮ್ಯಳ ಹಿನ್ನೆಲೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈಕೆಯ ಹಿಂದಿನ ಮದುವೆಗಳು ಮತ್ತು ಕಾರ್ತಿಕ್ ಸಾವಿನ ದಿನ ನಡೆದ ಘಟನೆಗಳ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು