ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದಿಯುವ ‘ವಿಕೃತ’ನ ಕಾಟ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಯ ಕೃತ್ಯ!

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಕಳೆದ 2-3 ದಿನಗಳಿಂದ ವಿಚಿತ್ರ ಹಾಗೂ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ತಡರಾತ್ರಿ ಮನೆಗಳ ಕಂಪೌಂಡ್ ಹಾರಿ ಒಳ ನುಗ್ಗುವ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಪ್ರಮುಖ ಬಡಾವಣೆಗಳು ಹಾಗೂ ಉದ್ಯಮಿಗಳ ಮನೆಗಳನ್ನೇ ಗುರಿಯಾಗಿಸಿಕೊಂಡಿರುವ ಈ ಕಿಡಿಗೇಡಿ, ಹಗಲು ಹೊತ್ತಿನಲ್ಲಿ ಎಲ್ಲಿ ಬಟ್ಟೆಗಳನ್ನು ಒಣಗಲು ಹಾಕಲಾಗಿದೆ ಎಂದು ಸರ್ವೇ ಮಾಡುತ್ತಾನೆ. ನಂತರ ತಡರಾತ್ರಿ ಎಲ್ಲರೂ ಮಲಗಿದ ಮೇಲೆ ಗೋಡೆ ಹಾರಿ ಒಳನುಗ್ಗಿ ವಿಕೃತವಾಗಿ ವರ್ತಿಸುತ್ತಾನೆ. ಮನೆಯ ಹೊರಗೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಆಯ್ದು ಕದಿಯುವುದು ಈತನ ಹವ್ಯಾಸವಾಗಿದೆ.

Advertisement

Advertisement

ಕಳೆದ ಕೆಲವು ದಿನಗಳಿಂದ ಬಟ್ಟೆಗಳು ನಾಪತ್ತೆಯಾಗುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕರು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಈ ಅಸಹ್ಯಕರ ಕೃತ್ಯ ಬಯಲಾಗಿದೆ. ಕತ್ತಲಿನಲ್ಲಿ ಕಂಪೌಂಡ್ ಒಳಗೆ ನುಸುಳಿ ಬಟ್ಟೆಗಳನ್ನು ಎಗರಿಸುವ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಪುತ್ತೂರು ಉದ್ಯಮಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೇಕಪ್ ಆರ್ಟಿಸ್ಟ್ ಪತ್ನಿ ಇದಕ್ಕೆ ಕಾರಣ? ಹಲವು ಆರೋಪ

ಈ ವಿಕೃತ ಮನಸ್ಥಿತಿಯ ವ್ಯಕ್ತಿಯ ವರ್ತನೆಯಿಂದ ಮಹಿಳೆಯರು ಮತ್ತು ನಿವಾಸಿಗಳು ಆತಂಕಗೊಂಡಿದ್ದಾರೆ. ಇದು ಕೇವಲ ಕಳ್ಳತನವಲ್ಲ, ಮಹಿಳೆಯರ ಸುರಕ್ಷತೆಗೆ ಇರುವ ದೊಡ್ಡ ಬೆದರಿಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಈ ವಿಕೃತನನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ನಿವಾಸಿಗಳು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು