ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಾ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಗುರುವಾರ) ತುಸು ತಣ್ಣಗಾಗಿವೆ. ಬುಧವಾರ ಭಾರಿ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ, ಇಂದು ಗಣನೀಯವಾಗಿ ಇಳಿಕೆ ಕಾಣುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 230 ರೂಪಾಯಿಗಳಷ್ಟು ಇಳಿಕೆಯಾಗಿದೆ. ಇದರಿಂದಾಗಿ 10 ಗ್ರಾಮ್ (ಒಂದು ತಟ್ಟೆ) ಚಿನ್ನದ ಬೆಲೆಯಲ್ಲಿ ಸುಮಾರು 2,300 ರೂಪಾಯಿಗಳಷ್ಟು ವ್ಯತ್ಯಾಸ ಕಂಡುಬಂದಿದೆ.

22 ಕ್ಯಾರಟ್ ಆಭರಣ ಚಿನ್ನ: ನಿನ್ನೆ ₹13,885 ಇದ್ದ ಬೆಲೆ ಇಂದು ₹13,655ಕ್ಕೆ ಇಳಿದಿದೆ. (10 ಗ್ರಾಮ್ ಬೆಲೆ: ₹1,36,550).
24 ಕ್ಯಾರಟ್ ಅಪರಂಜಿ ಚಿನ್ನ: ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ ₹14,897 ದಾಖಲಾಗಿದೆ. (10 ಗ್ರಾಮ್ ಬೆಲೆ: ₹1,48,970).

ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ಬೆಲೆಯೂ ಇಂದು ಇಳಿಕೆ ಕಂಡಿದೆ. ನಿನ್ನೆ 5 ರೂಪಾಯಿ ಏರಿಕೆಯಾಗಿದ್ದ ಬೆಳ್ಳಿ, ಇಂದು ಅಷ್ಟೇ ಪ್ರಮಾಣದಲ್ಲಿ ಅಂದರೆ 5 ರೂಪಾಯಿ ಇಳಿದಿದೆ.
ಇದನ್ನೂ ಓದಿ: ಮಂಗಳೂರು ಬಂದರಿನ ಬರ್ತ್ ನಂ. 9 ಆಧುನೀಕರಣ: LPG, ಕ್ರೂಡ್ ಹ್ಯಾಂಡ್ಲಿಂಗ್ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ

ಬೆಂಗಳೂರು ಹಾಗೂ ಮುಂಬೈ: ಇಲ್ಲಿ ಪ್ರತಿ ಗ್ರಾಮ್ ಬೆಳ್ಳಿ ಬೆಲೆ ₹250ಕ್ಕೆ ತಲುಪಿದೆ (100 ಗ್ರಾಮ್ಗೆ ₹25,000).
ಚೆನ್ನೈ ಹಾಗೂ ಕೇರಳ: ದಕ್ಷಿಣದ ಕೆಲವು ರಾಜ್ಯಗಳಲ್ಲಿ ಬೆಲೆ ತುಸು ಹೆಚ್ಚಿದ್ದು, ಪ್ರತಿ 100 ಗ್ರಾಮ್ಗೆ ₹25,500 ದರವಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಬದಲಾವಣೆಗಳು ಭಾರತೀಯ ಬುಲಿಯನ್ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿವೆ. ವಿದೇಶಗಳಲ್ಲಿ ಕೆಲವು ಕಡೆ ಬೆಲೆ ಏರಿಕೆಯಾಗಿದ್ದರೂ, ಭಾರತದಲ್ಲಿ ಮಾತ್ರ ಗ್ರಾಹಕರಿಗೆ ಲಾಭದಾಯಕ ವಾತಾವರಣ ನಿರ್ಮಾಣವಾಗಿದೆ. ಮದುವೆ ಸೀಸನ್ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಬೆಲೆ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿರಾಳ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

