ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಭಾರಿ ಸಿಡಿಲಾಟ ಪ್ರದರ್ಶಿಸಿ 250 ರನ್‌ಗಳ ಅಬ್ಬರದ ಮೊತ್ತ ದಾಖಲಿಸಿ ಇತಿಹಾಸ ನಿರ್ಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಹಲವು ಮಹತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿತು.
ಆರ್‌ಸಿಬಿ 250 ರನ್‌ಗಳೊಂದಿಗೆ ಸಿಎಸ್‌ಕೆ ವಿರುದ್ಧದ ಅತಿ ದೊಡ್ಡ ಮೊತ್ತ ದಾಖಲಿಸಿದೆ. ಇದುವರೆಗೆ ಗುಜರಾತ್ ಟೈಟನ್ಸ್ 231 ರನ್‌ಗಳ ದಾಖಲೆ ಹೊಂದಿತ್ತು.

ರೋಹಿತ್ ಶರ್ಮಾ ದಾಖಲೆ ಮುರಿದ ಕೊಹ್ಲಿ
ಈ ಪಂದ್ಯದಲ್ಲಿ ಕೊಹ್ಲಿ 28 ರನ್ ಗಳಿಸಿ, ಐಪಿಎಲ್ ಇತಿಹಾಸದಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಸಿಎಸ್‌ಕೆ ವಿರುದ್ಧ ಈಗಾಗಲೇ 1174 ರನ್ ಗಳಿಸಿರುವ ಕೊಹ್ಲಿ, ರೋಹಿತ್ ಶರ್ಮಾ ದಾಖಲೆಯನ್ನು ಹಿಂದಿಕ್ಕಿದರು.
ಇದನ್ನೂ ಓದಿ: IPL: ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಡೇವಿಡ್ ಸ್ಫೋಟಕ ಬ್ಯಾಟಿಂಗ್, CSK ವಿರುದ್ಧ RCBಗೆ ಭರ್ಜರಿ ಗೆಲುವು

ಸಿಕ್ಸರ್ ಮಳೆ
ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಒಟ್ಟು 19 ಸಿಕ್ಸರ್‌ಗಳನ್ನು ಸಿಡಿಸಿ ಹೊಸ ದಾಖಲೆ ನಿರ್ಮಿಸಿದರು. ಇದುವರೆಗೆ ಕೆಕೆಆರ್ ಮತ್ತು ಆರ್‌ಆರ್ ತಂಡಗಳು ಸಿಎಸ್‌ಕೆ ವಿರುದ್ಧ 17 ಸಿಕ್ಸರ್‌ಗಳ ದಾಖಲೆ ಹೊಂದಿದ್ದವು.
ಭುವನೇಶ್ವರ್ ಕುಮಾರ್ ಐತಿಹಾಸಿಕ ಸಾಧನೆ
ಸಿಎಸ್‌ಕೆ ಇನಿಂಗ್ಸ್ ವೇಳೆ ಆಯುಷ್ ಮ್ಹಾಥ್ರೆ ಅವರನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 192 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಯಜುವೇಂದ್ರ ಚಹಾಲ್ ನಂತರ ಈ ಮೈಲಿಗಲ್ಲು ಸಾಧಿಸಿದ ಎರಡನೇ ಬೌಲರ್ ಇವರಾಗಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

