IPL: ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಡೇವಿಡ್ ಸ್ಫೋಟಕ ಬ್ಯಾಟಿಂಗ್, CSK ವಿರುದ್ಧ RCBಗೆ ಭರ್ಜರಿ ಗೆಲುವು

ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೆನ್ನೈ ಸೂಪರ್‌ಕಿಂಗ್ಸ್ (CSK) ವಿರುದ್ಧ 43 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭದಲ್ಲೇ ವಿರಾಟ್ ಕೊಹ್ಲಿ ಔಟ್ ಆದರೂ, ಆರ್‌ಸಿಬಿ ಬ್ಯಾಟರ್‌ಗಳು ಚೆನ್ನೈ ಬೌಲರ್‌ಗಳನ್ನು ಕಂಗೆಡಿಸಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್‌ಗಳನ್ನು ಚಚ್ಚಿದರು. ಫಿಲ್ ಸಾಲ್ಟ್ 46 ರನ್‌, ದೆವದತ್ ಪಡಿಕ್ಕಲ್ 50 ರನ್‌, ರಜತ್ ಪಟೀದಾರ್ ಅಜೇಯ 48 ರನ್‌ಗಳ ಸಹಾಯದಿಂದ ತಂಡ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು. ವಿರಾಟ್ ಕೊಹ್ಲಿ 28 ರನ್ ಗಳಿಸಿದರು.

ಚೆನ್ನೈ ಪರ ಶಿವಂ ದುಬೆ, ಅನ್ಶುಲ್ ಕಂಬೋಜ್ ಹಾಗೂ ಜೇಮೀ ಓವರ್ಟನ್ ತಲಾ 1 ವಿಕೆಟ್ ಪಡೆದರು.

ಇದನ್ನೂ ಓದಿ: ಕ್ಲಾಸೆನ್ ಹೋರಾಟ ವ್ಯರ್ಥ: ಪಂತ್ ನಾಯಕತ್ವದಲ್ಲಿ LSG ಗೆ ಜಯ

251 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಚೆನ್ನೈ ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಆರಂಭಿಕ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ಗೆ ಔಟ್ ಆದರು. ಸರ್ಫರಾಜ್ ಖಾನ್ ಮತ್ತು ಪ್ರಶಾಂತ್ ವೀರ್ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.

ಇದರಿಂದ ಚೆನ್ನೈ ತಂಡ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 207 ರನ್‌ಗಳಷ್ಟೇ ಗಳಿಸಿತು.

ಚೆನ್ನೈ ಪರ ಸಂಜು ಸ್ಯಾಮ್ಸನ್ 9, ರುತುರಾಜ್ ಗಾಯಕ್ವಾಡ್ 7, ಆಯುಷ್ ಮ್ಹಾತ್ರೆ 1, ಸರ್ಫರಾಜ್ ಖಾನ್ 50, ಕಾರ್ತಿಕ್ ಶರ್ಮಾ 6, ಶಿವಂ ದುಬೆ 18, ಪ್ರಶಾಂತ್‌ವೀರ್ 43, ಜೇಮೀ ಓವರ್ಟನ್ 37, ಅನ್ಶುಲ್ ಕಂಬೋಜ್ ಅಜೇಯ 19, ನೂರ್ ಅಹ್ಮದ್ 8 ಹಾಗೂ ಮ್ಯಾಟ್ ಹೆನ್ರಿ 2 ರನ್ ಗಳಿಸಿದರು.

ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು. ಜಾಕೋಬ್ ಡಫ್ಪಿ 2, ಅಭಿನಂದನ್ ಸಿಂಗ್ 2, ಕೃನಾಲ್ ಪಾಂಡ್ಯ 2 ಹಾಗೂ ಸುಯಾಶ್ ಶರ್ಮಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು